ನಾಕೌಟ್ ಪಂದ್ಯದಲ್ಲಿ ಮಳೆ ಬಂದರೆ ಫಲಿತಾಂಶ ಹೊರಬೀಳುವುದು ಹೇಗೆ? ನಿಯಮಗಳು ಹೇಳುವುದೇನು? – t20 world cup 2022 semifinal and final rules after rain know it all in kannada


T20 World Cup 2022: ಟಿ20 ವಿಶ್ವಕಪ್ 2022 ರ ಮೊದಲ ಸೆಮಿಫೈನಲ್ ಪಂದ್ಯವು ಸಿಡ್ನಿಯಲ್ಲಿ ನವೆಂಬರ್ 9 ರಂದು ನಡೆಯಲಿದೆ. ಮರುದಿನ ಅಂದರೆ ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.

ನಾಕೌಟ್ ಪಂದ್ಯದಲ್ಲಿ ಮಳೆ ಬಂದರೆ ಫಲಿತಾಂಶ ಹೊರಬೀಳುವುದು ಹೇಗೆ? ನಿಯಮಗಳು ಹೇಳುವುದೇನು?

ಪ್ರಾತಿನಿಧಿಕ ಚಿತ್ರ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2022) ಈಗ ಕೊನೆಯ ಹಂತ ತಲುಪಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಮಳೆಯ ಅವಾಂತರ ನಿರಂತರವಾಗಿ ಕಂಡುಬರುತ್ತಿದ್ದು, ಹಲವು ತಂಡಗಳ ಸೆಮಿಫೈನಲ್‌ ಸಮೀಕರಣವನ್ನೇ ಕೆಡಿಸಿದೆ. ಆತಿಥೇಯ ಆಸ್ಟ್ರೇಲಿಯಾದ ಒಂದು ಪಂದ್ಯವೂ ಮಳೆಗೆ ಬಲಿಯಾಗಿದೆ. ಸದ್ಯ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಪಂದ್ಯ ನಡೆಯದಿದ್ದರೆ ತಲಾ ಒಂದೊಂದು ಅಂಕಗಳನ್ನು ಉಭಯ ತಂಡಗಳಿಗೂ ಹಂಚಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಾಕೌಟ್ ಪಂದ್ಯಗಳಲ್ಲಿ ಅಂದರೆ ಸೆಮಿಫೈನಲ್ ಮತ್ತು ಫೈನಲ್‌ಗಳಲ್ಲಿ ಮಳೆಯಾದರೆ ಪಂದ್ಯದ ಫಲಿತಾಂಶವನ್ನು ಹೇಗೆ ನಿರ್ಣಹಿಸಲಾಗುತ್ತದೆ ಎಂಬುದರ ವಿವರಣೆ ಹೀಗಿದೆ.

ಸೂಪರ್ 12 ಸುತ್ತಿಗಾಗಿ ಮಾಡಲಾದ ನಿಯಮಗಳ ಪ್ರಕಾರ, ಮಳೆಯಿಂದಾಗಿ ಪಂದ್ಯವನ್ನು ರದ್ದು ಮಾಡಿದರೆ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಆದರೆ ಪಂದ್ಯದ ವೇಳೆ ಮಳೆ ಬಂದರೂ ಸಹ ಉಭಯ ತಂಡಗಳು ತಲಾ 5 ಓವರ್​ಗಳನ್ನು ಆಡಲು ಸಫಲವಾದರೆ ಆಗ ವಿನ್ನರ್ ತಂಡವನ್ನು ಘೋಷಿಸಲಾಗುತ್ತಿತ್ತು. ಆದರೆ, ಫೈನಲ್‌ ಮತ್ತು ಸೆಮಿಫೈನಲ್‌ಗಳಲ್ಲಿ ನಿಯಮಗಳೇ ಪೂರ್ಣ ಬದಲಾಗಲಿವೆ.

ಕನಿಷ್ಠ 10 ಓವರ್‌ಗಳಾದರೂ ಪಂದ್ಯ ನಡೆಯಬೇಕು

ಐಸಿಸಿ, ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಿದೆ. ಅದೇನೆಂದರೆ, ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ ಮರುದಿನವೇ ಪಂದ್ಯ ನಡೆಯಲಿದೆ. ಮತ್ತೊಂದೆಡೆ, ಪಂದ್ಯದ ವೇಳೆ ಮಳೆ ಬಂದರೆ, ಇನ್ನಿಂಗ್ಸ್‌ಗೆ ಐದು ಓವರ್‌ಗಳವರೆಗೆ ಕಾಯಬೇಕಾಗಿಲ್ಲ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಬೇಕಾದರೆ ಎರಡೂ ಇನಿಂಗ್ಸ್‌ಗಳಲ್ಲಿ ಕನಿಷ್ಠ 10 ಓವರ್‌ಗಳು ನಡೆಯಬೇಕು. ಇದು ಆಗದಿದ್ದಲ್ಲಿ ಮರುದಿನ (ಮೀಸಲು ದಿನ) ಪಂದ್ಯ ನಡೆಯಲಿದೆ.

TV9 Kannada


Leave a Reply

Your email address will not be published.