ನಾಗಚೈತನ್ಯ ಸಿನಿಮಾ ಶೂಟಿಂಗ್​ ವೇಳೆ ಅವಘಡ.. ಐತಿಹಾಸಿಕ ಕಲ್ಯಾಣಿಯಲ್ಲಿ ಸಿಲುಕಿಕೊಂಡ ಕ್ರೇನ್


ಮಂಡ್ಯ: ಮೇಲುಕೋಟೆಯಲ್ಲಿ ತೆಲಗು ನಟ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರಿಕರಣದ ವೇಳೆ ಕ್ರೇನ್​ ಕಲ್ಯಾಣಿಯಲ್ಲಿ ಸಿಲುಕಿದ್ದು ಕಲ್ಯಾಣಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇತ್ತೀಚಿಗೆ ತಮಿಳು ಬಂಗಾರರಾಜು-2 ಸಿನಿಮಾದ ಸಿನಿಮಾ ಚಿತ್ರಿಕರಣದ ವೇಳೆ ಯಡವಟ್ಟೊಂದು ಸಂಭವಿಸಿದ ಬೆನ್ನಲ್ಲೇ ಇದೀಗ ತೆಲಗು ಸ್ಟಾರ್​ ನಟ ನಾಗಚೈತನ್ಯ ಅಭಿನಯದ ಸಿನಿಮಾ ಚಿತ್ರಿಕರಣದ ವೇಳೆ ಕಲ್ಯಾಣಿಯಲ್ಲಿ ಕ್ರೇನ್​ ಸಿಲುಕಿಕೊಂಡು ಅವಾಂತರ ಸೃಷ್ಟಿಸಿದೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಈ ಘಟನೆ ನಡೆದಿದ್ದು ಅನುಮತಿ ಪಡೆಯದೇ ನಿಯಮಗಳ್ನು ಉಲ್ಲಂಘಿಸಿ ಕಲ್ಯಾಣಿಯಲ್ಲಿ ಕ್ರೇನ್​ ಮೂಲಕ ಶೂಟಿಂಗ್​ ನಡೆಸಿರುವ ಆರೋಪ ಕೇಳಿ ಬಂದಿದೆ. ಎರಡು ದಿನಗಳಿಂದ ಮಳೆಯಾಗಿದ್ದರಿಂದ ಮಣ್ಣು ತೇವವಿದ್ದು ಪರಿಣಾಮ ಕ್ರೇನ್​ ಕಲ್ಯಾಣಿಯಲ್ಲಿ ಜಾರಿ ಸಿಕ್ಕಿ ಹಾಕಿಕೊಂಡಿದೆ. ಇನ್ನು ಕ್ರೇನ್​ ಮೇಲೆಕ್ಕೆತ್ತುವಾಗ ಐತಿಹಾಸಿಕ ಕಲ್ಯಾಣಿಯ ಕಲ್ಲುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇನ್ನು ಚಿತ್ರಿಕರಣ ತಂಡದಿಂದ ಚೆಲುವನಾರಾಯಣಸ್ವಾಮಿ ಅಭಿಷೇಕಕ್ಕೆ ಬಳಸುತ್ತಿದ್ದ ಕಲ್ಯಾಣಿ ನೀರು ಈಗಾಗಲೇ ಕಲುಷಿತಗೊಂಡಿದ್ದು ಸಾರ್ವಜನಿಕರನ್ನು ಕೆರಳಿಸಿದೆ. ಅಂತ್ರದಲ್ಲಿ ಇದೀಗ ಈ ಅವಘಡ ಸಂಭವಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತಿಚಿಗೆ ಪಾಳು ಬಿದ್ದಿದ್ದ ಕಲ್ಯಾಣಿಯನ್ನು ಇನ್ಫೋಸಿಸ್​ ಸುಧಾಮೂರ್ತಿ ಜೀಣೋದ್ಧಾರ ಮಾಡಿದ್ದರು .

News First Live Kannada


Leave a Reply

Your email address will not be published. Required fields are marked *