ನಾಗರಹಾವು ಮನೆಯೊಳಗೆ ಪ್ರವೇಶಿಸದಂತೆ ತಡೆಯುವಲ್ಲಿ ಸಫಲವಾದ ನಾಯಿ ಅದನ್ನು ಕೊಂದು ತಾನೂ ಸತ್ತಿತು! | A faithful dog loses its life while preventing a cobra from entering its master’s house ARBಯಜಮಾನನ ಕುಟುಂಬ ಸದಸ್ಯರಿಗೆ ಕಂಟಕವಾಗಬಹುದಾಗಿದ್ದ ಭಾರಿ ಗಾತ್ರದ ನಾಗರಹಾವಿನೊಂದಿಗೆ ಸೆಣಸಿ ತನ್ನ ಪ್ರಾಣವನ್ನು ಬಲಿಕೊಟ್ಟ ನಾಯಿ ಇದು. ಹಾವಿನ ಕಡಿತದಿಂದ ದೇಹದಲ್ಲಿ ವಿಷ ಪಸರಿಸಿ ನಾಯಿ ಕೊನೆಯುಸಿರೆಳೆದಾಗ ಅದರ ಯಜಮಾನನ ಕುಟುಂಬದ ಸದಸ್ಯರು ಬಹಳ ರೋದಿಸಿದರು.

TV9kannada Web Team


| Edited By: Arun Belly

May 19, 2022 | 8:55 PM
Kolar: ವಿಶ್ವಾಸ, ಸ್ವಾಮಿನಿಷ್ಠೆ (faithfulness) ಮತ್ತು ಪ್ರೀತಿಗೆ ಮತ್ತೊಂದು ಹೆಸರೇ ನಾಯಿ. ಇದು ಕಾಲ ಕಾಲದಿಂದ ಅಂದರೆ ಶತಮಾನಗಳಿಂದ ಸಾಬೀತಾಗಿರುವ ಅಂಶ. ನಾಯಿಗಳ ನಿಷ್ಠೆಯ (loyalty) ಕತೆಗಳು, ಜ್ವಲಂತ ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ. ಆ ಪಟ್ಟಿಗೆ ಕೋಲಾರದ (Kolar) ಈ ನಾಯಿಯನ್ನು ಸೇರಿಸಲೇಬೇಕಿದೆ ಮಾರಾಯ್ರೇ. ಮನೆಯೊಳಗೆ ನುಸುಳಿ ತನ್ನ ಯಜಮಾನನ ಕುಟುಂಬ ಸದಸ್ಯರಿಗೆ ಕಂಟಕವಾಗಬಹುದಾಗಿದ್ದ ಭಾರಿ ಗಾತ್ರದ ನಾಗರಹಾವಿನೊಂದಿಗೆ ಸೆಣಸಿ ತನ್ನ ಪ್ರಾಣವನ್ನು ಬಲಿಕೊಟ್ಟ ನಾಯಿ ಇದು. ಹಾವಿನ ಕಡಿತದಿಂದ ದೇಹದಲ್ಲಿ ವಿಷ ಪಸರಿಸಿ ನಾಯಿ ಕೊನೆಯುಸಿರೆಳೆದಾಗ ಅದರ ಯಜಮಾನನ ಕುಟುಂಬದ ಸದಸ್ಯರು ಬಹಳ ರೋದಿಸಿದರು. ಕೆಲವರಂತೂ ಅನ್ನ-ನೀರು ಸಹ ಬಿಟ್ಟಿದ್ದರಂತೆ.

ಅಂದಹಾಗೆ, ನಾಯಿಯ ಹೆಸರು ಕ್ಯಾಸಿ. ಅದನ್ನು ಕುಟುಂಬದ ಒಬ್ಬ ಸದಸ್ಯನಂತೆ ಸಾಕಿ ಬೆಳೆಸಿದವರು ಕೆ ಎಸ್ ಆರ್ ಟಿ ಸಿ ಯಲ್ಲಿ ನೌಕರಿ ಮಾಡುವ ವೆಂಕಟೇಶ್. ಇವರು ವಾಸವಾಗಿರೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬಿರಾಂಡಹಳ್ಳಿಯಲ್ಲಿ.

ಬುಧವಾರ ವೆಂಕಟೇಶ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿದ್ದಾಗ ಮನೆಯಂಗಳದಲ್ಲಿ ಒಂದು ದೊಡ್ಡ ಗಾತ್ರದ ಹಾವು ಕಾಣಿಸಿಕೊಂಡಿದೆ. ಅದು ಮನೆಯೊಳಗೆ ನುಗ್ಗಿದರೆ ಅಲ್ಲಿರುವವರಿಗೆ ಕಂಟಕವಾಗಬಹುದು ಅನ್ನೋದು ಕ್ಯಾಸಿಯ ಅರಿವಿಗೆ ಬಂದಿರಬಹುದು. ಕೂಡಲೇ ಅದರೊಂದಿಗೆ ಸೆಣಸಾಟಕ್ಕೆ ನಿಂತಿದೆ. ಎರಡರ ನಡುವೆ ಭೀಕರ ಕಾಳಗ ನಡೆದಿದೆ. ಆ ಸಮಯದಲ್ಲಿ ಹಾವು ಕ್ಯಾಸಿಯನ್ನು ಎಷ್ಟು ಬಾರಿ ಕಚ್ಚಿದಿಯೋ ಗೊತ್ತಿಲ್ಲ ಮಾರಾಯ್ರೇ. ಆದರೆ, ತಾನು ಪ್ರಾಣ ಬಿಡುವ ಮೊದಲು ಹಾವನ್ನು ಕಚ್ಚಿ ಕೊಂದುಹಾಕಿದೆ.

TV9 Kannada


Leave a Reply

Your email address will not be published. Required fields are marked *