ಮಂಡ್ಯ: ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲವೆಂದು ರಾಜ್ಯ ಸರ್ಕಾರ ಟೆಕ್ನಿಕಲ್ ರಿಪೋರ್ಟ್ ಬಿಡುಗಡೆ ಮಾಡಿದೆ. ಹೀಗಾಗಿ ಕೂಡಲೇ ಸರ್ಕಾರ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಸುಮಲತಾ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲವೆಂದು ರಾಜ್ಯ ಸರ್ಕಾರ ಟೆಕ್ನಿಕಲ್ ರಿಪೋರ್ಟ್ ಬಿಡುಗಡೆ ಮಾಡಿದೆ. ಆದರೆ ಇವರು ಯಾಕೇ ಇದನ್ನ ಸೃಷ್ಟಿ ಮಾಡಿ ಜನರಲ್ಲಿ ಆತಂಕ ಮೂಡಿಸ್ತಿದ್ದಾರೆ ಎಂದು ಪ್ರಶ್ನಿಸಿದರು.

ಇದು ರಾಜ್ಯ ಹಾಗೂ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸುವ ಸಂಗತಿ ಆಗಿದೆ. ಒಬ್ಬ ಸಂಸದೆ ಈ ರೀತಿ ಉದ್ದೇಶ ಇಟ್ಟಕೊಂಡರೆ ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಏನು ಮಾಡ್ತಿದೆ? ಇವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ವಾ? ಸಾಮಾನ್ಯ ವ್ಯಕ್ತಿ ಕಟ್ಟೆ ಒಡೆದಿದೆ ಅಂತ ಹೇಳಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ತೀರಿ. ಇಲ್ಲಿ ಸಂಸದರು ಈ ರೀತಿಯ ಹೇಳಿಕೆ ನೀಡಿದ್ದಾರೆ. ದೇಶದ ಗೌಪ್ಯತೆ ಕಾಪಾಡ್ತೀನಿ ಎಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೆಆರ್​ಎಸ್​ ಡ್ಯಾಂ ಬಗ್ಗೆ ಇವರು ಬಹಿರಂಗವಾಗಿ ಹೇಳೋದು ಏನಿದೆ? ನಾಗರಿಕರು, ವಿದ್ಯಾವಂತರು ಮಾಡುವ ಕೆಲಸನಾ ಇದು ಎಂದು ಪ್ರಶ್ನಿಸಿದ್ದಾರೆ.

ನೀವು ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳ್ತೀರಲ್ವಾ? ಬೇರೆ ದಿನ ಆ್ಯಂಟಿ ಎಲಿಮೆಂಟ್ಸ್ ಇದನ್ನ ಅಡ್ವಾಂಟೇಜ್ ತಗಳೋ ಪ್ರಯತ್ನ ಮಾಡಿದ್ರೆ ನಮ್ಮ ದೇಶಕ್ಕೆ ನಷ್ಟ ಆಗಲ್ವಾ? ಈ ರೀತಿಯ ಹೇಳಿಕೆ ಕೊಟ್ಟರೆ ದೇಶ ದ್ರೋಹ ಅನ್ನೋದು? ರಿಪೋರ್ಟ್ ಇದ್ದರೆ ತೆಗೆದುಕೊಂಡು ಬನ್ನಿ. ನಮ್ಮ ಮಹಾರಾಜರು ಕಟ್ಟಿರುವ ಡ್ಯಾಂ ಅದು. ಸುಮ್ಮನೆ ಯಾಕೆ KRS ಡ್ಯಾಂಗೆ ಅಪಕೀರ್ತಿ ತರುತ್ತೀರಾ? ನೀವು ಗೆದ್ದಿರೋದು ನಮ್ಮ ಡ್ಯಾಂ ಸರಿ ಇಲ್ಲ ಎಂದು ಹೇಳೋದಕ್ಕಾ? ಓರ್ವ ಎಂಪಿಯಾಗಿ ಜವಾಬ್ದಾರಿ ಇದ್ಯಾ ನಿಮಗೆ ಎಂದು ಪ್ರಶ್ನೆ ಮಾಡಿದ್ದಾರೆ.

The post ನಾಗರಿಕರು, ವಿದ್ಯಾವಂತರು ಮಾಡುವ ಕೆಲ್ಸನಾ ಇದು- ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ appeared first on News First Kannada.

Source: newsfirstlive.com

Source link