ನಾಗಿಣಿ-2 ಸೀರಿಯಲ್​ಗೆ ನಟ ಮೋಹನ್‌ ಎಂಟ್ರಿ.. ಯಾವಾಗ..?

ನಾಗಿಣಿ-2 ಸೀರಿಯಲ್​ಗೆ ನಟ ಮೋಹನ್‌ ಎಂಟ್ರಿ.. ಯಾವಾಗ..?

ನಾಗಿಣಿ-2 ಧಾರವಾಹಿಯಲ್ಲಿ ದಿಗ್ವಿಜಯ್ ಪಾತ್ರ ಗೊತ್ತಲ್ವಾ? ಈ ನೆಗೆಟಿವ್ ಶೇಡ್ ಇರೋ ಈ ಪಾತ್ರದ ತೂಕ ತುಸು ಹೆಚ್ಚೇ ಇದೆ. ಅದೇ ಕಾರಣಕ್ಕೆ ಸ್ಯಾಂಡಲ್‌ವುಡ್‌ನ ಪ್ರತಿಭಾವಂತರಾದ ನಟ ಮೋಹನ್ ಸೆಲೆಕ್ಟ್ ಆದರು. 20 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವ ಮೋಹನ್ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಹಲವು ಚಿತ್ರಗಳಲ್ಲಿ ನಟಿಸಿದ್ದರು. ಹೀಗಾಗಿ ನಟ ಮೋಹನ್ ನಾಗಿಣಿ ೨ ಗೆ ಬಂದಾಗ ಜನರ ಅಪೇಕ್ಷೆ ಜಾಸ್ತಿಯೇ ಇತ್ತು. ಅದಕ್ಕೆ ತಕ್ಕಂತೆ ದಿಗ್ವಿಜಯ್ ಪಾತ್ರಕ್ಕೆ ಜೀವ ತುಂಬಿದರು ನಟ ಮೋಹನ್.

ಈಗ ಮೋಹನ್ ವಿಷ್ಯ ಯಾಕ್ ಮಾತನಾಡ್ತಿದ್ದೇವೆ ಅನ್ನೋದಕ್ಕೆ ಕಾರಣವಿದೆ. ಅದೇನಂದ್ರೆ, ಕೋವಿಡ್ ಎರಡನೇ ಅಲೆ ಆರಂಭದಲ್ಲಿ ನಟಮೋಹನ್ ದಿಗ್ವಿಜಯ್ ಪಾತ್ರವನ್ನ ತೊರೆದಿದ್ದರು. ಕೋವಿಡ್ ಕಾರಣ ನೀಡಿ ನಾನು ನಟಿಸೋದಿಲ್ಲ ಅಂತಾ ಹೇಳಿದ್ದರು. ಅದಾದ ನಂತರ ದಿಗ್ವಿಜಯ್ ಪಾತ್ರವೇ ಸೀರಿಯಲ್‌ನಲ್ಲಿ ಕಾಣಿಸಿರಲಿಲ್ಲ. ಇಷ್ಟು ದಿನ ದಿಗ್ವಿಜಯ್ ಪಾತ್ರ ಮಿಸ್ ಮಾಡಿಕೊಂಡಿದ್ದ ವೀಕ್ಷಕರಿಗೆ ಒಂದು ಸುದ್ದಿಯಿದೆ. ಅದೇನಂದ್ರೆ, ದಿಗ್ವಿಜಯ್‌ ಪಾತ್ರಕ್ಕೆ ಮೋಹನ್ ಮತ್ತೆ ಬಣ್ಣ ಹಚ್ಚಿದ್ದಾರೆ. ನಾಗಿಣಿ-2 ಟೀಮ್‌ಗೆ ಮೋಹನ್‌ ಸೇರ್ಪಡೆಯಾಗಿದ್ದಾರೆ.

ನಟ ಮೋಹನ್‌ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸದ್ಯದಲ್ಲಿಯೇ ಅವರ ಎಂಟ್ರಯಾಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ. ನಾಗಿಣಿ-2 ಧಾರವಾಹಿ ಕಳೆದ ಹಲವು ವಾರಗಳಿಂದ ಟಾಪ್‌ ಲಿಸ್ಟ್‌ನಲ್ಲಿದೆ. ಕಥೆಯಲ್ಲಿನ ಟ್ವಿಸ್ಟ್ ಜನರಿಗೆ ಇಷ್ಟವಾದಂತೆ ಕಾಣಿಸ್ತಿದೆ. ಹೀಗಾಗಿ ದಿಗ್ವಿಜಯ್ ಎಲ್ಲೋದ್ರು ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡಿತ್ತು. ಇನ್ನೂ ಕೆಲ ದಿನಗಳಲ್ಲೇ ದಿಗ್ವಿಜಯ್‌ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

The post ನಾಗಿಣಿ-2 ಸೀರಿಯಲ್​ಗೆ ನಟ ಮೋಹನ್‌ ಎಂಟ್ರಿ.. ಯಾವಾಗ..? appeared first on News First Kannada.

Source: newsfirstlive.com

Source link