ಶಿವಮೊಗ್ಗ: ಮುಂಗಾರು ಆರಂಭದಲ್ಲಿಯೇ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದ ಐದಾರು ದಿನಗಳಿಂದ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದೆ. ಭಾರೀ ವರ್ಷಧಾರೆಯಿಂದಾಗಿ 766-C ಬೈಂದೂರು- ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನಾಗೋಡಿ ಘಾಟ್​​ನಲ್ಲಿ ರಸ್ತೆ ಕುಸಿತವಾಗಿ ಸಂಚಾರ ಸ್ಥಗಿತಗೊಂಡಿದೆ.

ರಸ್ತೆ ಕುಸಿತವಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ಮಾರ್ಗದಲ್ಲಿ ಸಂಚಾರ ನಿಷೇಧ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ‌.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 30 ಅಥವಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ರಾಣೆಬೆನ್ನೂರು- ಹೊಸನಗರ- ಬೈಂದೂರು ಮಾರ್ಗದ ಸಂಚಾರ ನಿರ್ಬಂಧಿಸಲಾಗಿದೆ.  ಪರ್ಯಾಯವಾಗಿ ರಾಣೆಬೆನ್ನೂರು ಹೊಸನಗರ- ಮಾಸ್ತಿಕಟ್ಟೆ- ಸಿದ್ದಾಪುರ ಮಾರ್ಗದಲ್ಲಿ ತೆರಳಲು ಸೂಚನೆ ನೀಡಲಾಗಿದೆ.

ಹೀಗೆ ಮಲೆನಾಡಿನಲ್ಲಿ ಮಳೆ ಒಂದೊಂದೇ ಅವಾಂತರ ಸೃಷ್ಟಿಸುತ್ತಿದೆ. ಮಳೆಯಿಂದಾಗಿ ಮನೆಯಿಂದ ಹೊರಬರಲಾಗದೆ ಮಲೆನಾಡಿಗರು ಮನೆಯಲ್ಲೇ ಲಾಕ್ ಅಗಿದ್ದಾರೆ.

The post ನಾಗೋಡಿ ಘಾಟ್​​ನಲ್ಲಿ ರಸ್ತೆ ಕುಸಿತ, ಸಂಚಾರ ನಿಷೇಧಿಸಿ ಶಿವಮೊಗ್ಗ ಡಿಸಿ ಆದೇಶ appeared first on News First Kannada.

Source: newsfirstlive.com

Source link