ಬೆಳಗಾವಿ: ಡಿಸಿಎಂ ಸವದಿ ಪುತ್ರ ಚಿದಾನಂದ ಕಾರ್​ ಆಕ್ಸಿಡೆಂಟ್​ ಕುರಿತು ಮಾಧ್ಯಮದವರಿಗೆ ವಿವರಣೆ ನೀಡಿದ್ದಾರೆ. ನಾನು ಮತ್ತು ಸ್ನೇಹಿತರು ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ಹೋಗಿದ್ವಿ.. ವಾಪಸ್​ ಬರುವಾಗ ಅಪಘಾತವಾಗಿದೆ, ಈ ವೇಳೆ ನಾನಿದ್ದ ಕಾರಿಗೂ ಹಾಗೂ ಅಪಘಾತವಾದ ಕಾರಿಗೂ 30 ಕಿ.ಮೀನಷ್ಟು ಅಂತರವಿತ್ತು ಎಂದಿದ್ದಾರೆ.

ಅಪಘಾತವಾದ ಕೂಡಲೇ ಡ್ರೈವರ್​ ನನಗೆ ಕಾಲ್​ ಮಾಡಿ ವಿಷಯ ತಿಳಿಸಿದ. ತಕ್ಷಣ ಘಟನಾ ಸ್ಥಳಕ್ಕೆ ನಾನು ಬಂದಿದ್ದು ಅಪಘಾತ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ. ಆಸ್ಪತ್ರೆಗೆ ಹೋದಾಗಲೂ ಅಲ್ಲಿ ಮೃತ ವ್ಯಕ್ತಿಯ ಸಂಬಂಧಿಕರು ಯಾರೂ ಇರಲಿಲ್ಲ, ಹೀಗಾಗಿ ನಾನು ಯಾರನ್ನೂ ಭೇಟಿ ಮಾಡಿ ನಾನು ಡಿಸಿಎಂ ಮಗ ಅಂತ ಹೇಳಿಲ್ಲ.

ಈ ದುರ್ಘಟನೆಯಿಂದ ನನಗೂ ನೋವಾಗಿದ್ದು ಭಗವಂತ ಆ ಸಾವಿನ ದುಖಃವನ್ನು ಸಹಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲಿ ಎಂದು
ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಇದೇ ವೇಳೆ ಚಿದಾನಂದ ಹೇಳಿದ್ದಾರೆ.

The post ನಾನಿದ್ದ ಕಾರ್​ಗೂ ಆ್ಯಕ್ಸಿಡೆಂಟ್​ ಆದ ಕಾರ್​ಗೂ 30 ಕಿ.ಮೀನಷ್ಟು ಅಂತರವಿತ್ತು- ಸವದಿ ಪುತ್ರ appeared first on News First Kannada.

Source: newsfirstlive.com

Source link