‘ಟಗರು’ ಸಿನಿಮಾದಲ್ಲಿ ಚಿಟ್ಟೆ-ಡಾಲಿ ಪಾತ್ರಗಳನ್ನ ಪ್ರೇಕ್ಷಕರು ಎಷ್ಟು ನೆನಪು ಇಟ್ಟುಕೊಂಡಿದ್ದಾರೋ ಅಷ್ಟೇ ಕಾಕ್ರೋಚ್​ ಪಾತ್ರವನ್ನೂ ಇಷ್ಟ ಪಟ್ಟಿದ್ದಾರೆ. ‘ಅಲೆಮಾರಿ’ ಸಿನಿಮಾದ ಮೂಲಕ ಅಕಸ್ಮಾತ್​​ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಧೀರ್​ ಅಲಿಯಾಸ್​ ಕಾಕ್ರೋಚ್​, ಟಗರು ಸಿನಿಮಾದ ನಂತರ ವಿಲನ್​ ಪಾತ್ರಗಳಿಗೆ ಫಿಕ್ಸ್​​ ಆಗಿದ್ದರು. ತಮ್ಮ ವಿಭಿನ್ನ ಶೈಲಿಯ ಗೆಟಪ್​ ಹಾಗೂ ನಟನೆಯ ಮೂಲಕ ಸೌಂಡ್​ ಮಾಡಿದ್ದ ಸುಧೀರ್​, ಇದೀಗ ನಾಯಕನಟನಾಗಿ ಮಿಂಚೋಕೆ ರೆಡಿಯಾಗ್ತಿದ್ದಾರೆ.

ಹೌದು.. ವಿಲನ್​ನಿಂದ ಫುಲ್​ ಟೈಂ ನಾಯಕನಾಗೋಕೆ ಹೊರಟಿದ್ದಾರೆ ಕಾಕ್ರೋಚ್​ ಸುಧಿ. ನಟ ದಿಗಂತ್​ ನಟನೆಯ ‘ಮಾರಿಗೋಲ್ಡ್’​​ ಸಿನಿಮಾದ ನಿರ್ದೇಶಕ ರಾಘವೇಂದ್ರ ನಾಯಕ್​ ಮುಂದಿನ ಚಿತ್ರದಲ್ಲಿ ಸುಧೀರ್​ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್​​ ಕೆಲಸಗಳು ಮುಗಿದಿದ್ದು, ಮೇ 1ರಿಂದ ಶೂಟಿಂಗ್​ ಶುರು ಮಾಡುವ ಪ್ಲ್ಯಾನ್​ ಹಾಕಿಕೊಂಡಿತ್ತು ಚಿತ್ರತಂಡ. ಇದೀಗ ಮತ್ತೆ ಕೊರೊನಾ ಕೇಸ್​ಗಳು ಜಾಸ್ತಿಯಾಗಿದ್ದು, ಲಾಕ್​ಡೌನ್​ ಹೇರಿರುವ ಕಾರಣ ಚಿತ್ರೀಕರಣ ಮೂಂದೂಡಲಾಗಿದೆ ಅಂತ ಸುಧೀರ್​ ನ್ಯೂಸ್​ ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ.

ಇದೊಂದು ಕ್ರೈಂ ಹಿನ್ನೆಲೆ ಇರುವಂತ ಕಥೆಯಾಗಿದ್ದು, ಲೀಡ್​ ರೋಲ್​ನಲ್ಲಿ ಕಾಕ್ರೋಚ್​ ಸುಧಿ ನಟಿಸಲಿದ್ದಾರೆ. ಇಲ್ಲಿಯವರಗೂ ಸಿನಿಮಾಗಳಲ್ಲಿ ಜನ ನೋಡಿರುವ ತಮ್ಮ ಗೆಟಪ್​​ ಈ ಸಿನಿಮಾದಲ್ಲಿ ಕಾಣ ಸಿಗೋದಿಲ್ಲ ಅನ್ನೋ ಸುಧಿ ಮಾತು. ಹೌದು.. ಈ ಸಿನಿಮಾಗಾಗಿ ವಿಭಿನ್ನ ಲುಕ್​ನಲ್ಲಿ ಸುಧೀರ್​ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೇ ನಿರ್ದೇಶಕ ರಾಘವೇಂದ್ರ ನಾಯಕ್​ ಅವರ ‘ಮಾರಿಗೋಲ್ಡ್’​ ಸಿನಿಮಾದಲ್ಲೂ ಸುಧೀರ್​ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟು ದಿನ ನೆಗೆಟಿವ್​ ಶೇಡ್​ನಲ್ಲಿ ಕಾಕ್ರೋಚ್​ ಸುಧಿ ಅವರನ್ನ ನೋಡಿ ಇಷ್ಟಪಟ್ಟ ಪ್ರೇಕ್ಷಕರು, ಇದೀಗ ನಾಯಕನಾಗಿ ಬರಲಿರೋ ಸುಧೀಯ ಹೊಸ ಲುಕ್​ನ ನಿರೀಕ್ಷೆಯಲ್ಲಿದ್ರೂ ತಪ್ಪೇನಿಲ್ಲ.

The post ‘ನಾನಿನ್ನು ಹೀರೋ’ ಯಾವ ಸಿನಿಮಾ ಮಾಡ್ತಿದ್ದಾರೆ ಗೊತ್ತಾ ಕಾಕ್ರೋಚ್​ ಸುಧಿ? appeared first on News First Kannada.

Source: newsfirstlive.com

Source link