ಬೆಂಗಳೂರು: ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ನಟ ಚೇತನ್ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕುರಿತು ಇಂದು ಪ್ರತಿಕ್ರಿಯೆ ನೀಡಿದ ಚೇತನ್​.. ಸಚಿರಾಗಿದ್ದು ಸಾಮಾನ್ಯರಂತೆ ಮಾತನಾಡೋದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ.

ಮಂತ್ರಿಯಾಗಿ ಆಧಿಕಾರದಲ್ಲಿದ್ದು ಗಂಜಿ ಕಾಸು ಅಂತ ಮಾತನಾಡಿದ್ದಾರೆ. ಆ ವಿಚಾರವನ್ನು ಚರ್ಚೆಗೆ ಮಾತ್ರ ಮುಂದುವರೆಸಬೇಕು. ಅದನ್ನ ಬಿಟ್ಟು ನನ್ನ ಬಂಧಿಸಿ ಜೈಲಿಗೆ ಹಾಕಿ ಅನ್ನೋದು ಎಷ್ಟು ಸರಿ..? ಸಚಿವರು ಅವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ತಿದ್ದಾರೆ. ಸಚಿವರ ಮಾತುಗಳು, ಟ್ವೀಟ್ ಗಳು ನಮ್ಮ ರಾಜ್ಯಕ್ಕೆ ಮಾರಕ ಎಂದು ಚೇತನ್ ಕಿಡಿಕಾರಿದ್ದಾರೆ.

ಪೌರತ್ವದ ವಿಚಾರಕ್ಕೂ ಕ್ಲಾರಿಟಿ ಕೊಟ್ಟ ಚೇತನ್.. ಪಾಸ್ ಪೋರ್ಟ್ ಇದ್ದವರು ಭಾರತೀಯರಲ್ಲವಾ..? ನಾವು 70 ಸಾವಿರ ವರ್ಷಗಳ ಮೂಲನಿವಾಸಿಗಳು. ನನ್ನ ಅಜ್ಜಿ, ತಾತ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ನಮ್ಮ ತಂದೆ ತಾಯಿ ಇಲ್ಲೇ ಹುಟ್ಟಿ ಬೆಳೆದವರು. ನಾನು ಅಮೆರಿಕಾದಲ್ಲಿ ಹುಟ್ಟಿರಬಹುದು. ಅಣ್ಣಾವ್ರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನ ಕೇಳಿದಾಗ ಭಾವನಾತ್ಮಕ ವಾಗಿ ಫೀಲ್ ಆಗುತ್ತೆ. ನಾನು ಕರ್ನಾಟಕದಲ್ಲಿ ಹುಟ್ಟಿಲ್ಲ ಅದ್ರೆ ಕರ್ನಾಟಕ ನನ್ನದು. ಇಲ್ಲಿ ಪಾಸ್ ಪೋರ್ಟ್ ಮುಖ್ಯವಲ್ಲ ಮಾನವೀಯತೆ ಮುಖ್ಯ. ಗಂಜಿ ಕಾಸಿನ‌ ಬಗ್ಗೆ ಮಾತನಾಡುವ ಶಿವರಾಮ್ ಹೆಬ್ಬಾರ್ ಭಾರತೀಯರಾ ಎಂದು ಸಚಿವ ಹೆಬ್ಬಾರ್​ಗೆ ಚೇತನ್ ಟಾಂಗ್ ಕೊಟ್ಟಿದ್ದಾರೆ.

The post ನಾನು ಅಮೆರಿಕದಲ್ಲಿ ಹುಟ್ಟಿರಬಹುದು ಆದ್ರೆ ಕರ್ನಾಟಕ ನನ್ನದು: ಹೆಬ್ಬಾರ್​ಗೆ ಚೇತನ್ ಟಾಂಗ್ appeared first on News First Kannada.

Source: newsfirstlive.com

Source link