ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಕೊರೊನಾ ವಿಚಾರವಾಗಿ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸ್ವತಃ ದೊಡ್ಡಣ್ಣ ಅವರು ನಾನು ಆರೋಗ್ಯವಾಗಿದ್ದೇನೆ. ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾತನಾಡಿದ ದೊಡ್ಡಣ್ಣ, ನಾನು ಆರೋಗ್ಯವಾಗಿದ್ದೇನೆ, ಯಾವುದೇ ಆತಂಕ ಬೇಡ, ಕೊರೊನಾ ವಿಚಾರವಾಗಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನನ್ನ ಫೋಟೋ ಹಾಕಿಕೊಂಡು ನಾನು ಕೊರೊನಾದಿಂದ ಮರಣ ಹೊಂದಿದ್ದೇನೆ ಎಂದು ಸಾಮಾಜಿಕ ಜಾಲತಾನದಲ್ಲಿ ಸುಳ್ಳು ಸುದ್ದಿ ಹರಿದಾಡಿದೆ ನಾನು ಚೆನ್ನಾಗಿ ಇದ್ದೇನೆ ಎಂದರು.

ಬೆಳಗ್ಗೆಯಿಂದ ನನಗೆ ಹಲವು ದೂರವಾಣಿ ಕರೆಗಳು ಬರುತ್ತಿದೆ ನಾನು ಮನೆಯಲ್ಲೇ ಇದ್ದೇನೆ ಆರೋಗ್ಯವಾಗಿದ್ದೇನೆ. ಯಾರು ಭಯ ಪಡಬೇಡಿ ಕನ್ನಡ ನಾಡಿನ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿರುವವರೆಗೆ ನನಗೆ ಏನು ಆಗುವುದಿಲ್ಲ. ನನ್ನ ಆಯುಷ್ಯ ಹೆಚ್ಚಾಗಿದೆ ನನಗೆ ಬರಲು ಇದ್ದ ಕಂಟಕ ಈ ಮೂಲಕ ಬಗೆಹರಿದಿದೆ ಎಂದು ನಾನು ತಿಳಿದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

The post ನಾನು ಆರೋಗ್ಯವಾಗಿದ್ದೇನೆ- ದೊಡ್ಡಣ್ಣ appeared first on Public TV.

Source: publictv.in

Source link