ನಾನು ಇಲ್ಲಿವರೆಗೂ ಅವರನ್ನು ಏಕವಚನದಲ್ಲಿ ಕರೆದಿಲ್ಲ – ದಿವ್ಯಾ

ಬಿಗ್‍ಬಾಸ್ ಮನೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಸ್ಪರ್ಧಿಗಳ ಜೊತೆ ಭಾನುವಾರ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಮೊದಲ ಸಂಚಿಕೆ ನಡೆಯಿತು. ಮೊದಲಿನಂತೆ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಯೆಸ್ ಆರ್ ನೋ ರೌಂಡ್ಸ್ ನಡೆದಿದೆ. ಈ ವೇಳೆ ಕಿಚ್ಚ ಸುದೀಪ್ ದಿವ್ಯಾ ಉರುಡುಗ ಅರವಿಂದ್ ಎದುರು ಮಾತನಾಡುವುದಕ್ಕೆ ಭಯ ಪಡುತ್ತಾರೆ ಎಂಬ ಪ್ರಶ್ನೆ ಕೇಳಿದ್ದಾರೆ.

ಆಗ ಮನೆಯ ಎಲ್ಲಾ ಸ್ಪರ್ಧಿಗಳು ಯೆಸ್ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ನೋ ಎಂದು ಹೇಳಿದ್ದರು. ಇದಕ್ಕೆ ನೋ ಏಕೆ ಎಂದು ಅರವಿಂದ್‍ರವರನ್ನು ಸುದೀಪ್ ಕೇಳುತ್ತಾರೆ. ನನ್ನ ನೋಡಿ ಏನು ಹೆದರಿಕೆ ಇಲ್ಲ. ಅವಳು ತುಂಬಾ ಆರಾಮಾಗಿದ್ದಾಳೆ ಎನ್ನುತ್ತಾರೆ. ಆಗ ಸುದೀಪ್ ನೀವು ಹೇಳುತ್ತಿರುವುದನ್ನು ನೋಡಿದರೆ ನೀವು ಭಯದಲ್ಲಿ ಉತ್ತರಿಸುತ್ತಿರುವಂತೆ ಇದೆ ಎಂದು ರೇಗಿಸುತ್ತಾರೆ.

ನಂತರ ಯೆಸ್ ಯಾಕೆ ರಘು ಎಂದು ಸುದೀಪ್ ಕೇಳಿದಾಗ, ಭಯಗಿಂತ ದಿವ್ಯಾ ಉರುಡುಗಗೆ ನಾಚಿಕೆ ಹಾಗೂ ಭಯ, ಭಕ್ತಿ ಸರ್ ಎಂದು ಹೇಳುತ್ತಾ ನಗುತ್ತಾರೆ. ನನಗೆ ಗೊತ್ತಿರುವ ಪ್ರಕಾರ ಯಾವುದಾದರೊಂದು ತೀರ್ಮಾನ ತೆಗೆದುಕೊಳ್ಳಬೇಕಾದರೆ ಅದರಲ್ಲಿ ಅವರು ಯಾವುದೇ ಇನ್‍ಫ್ಲೂಯೆನ್ಸ್ ಆಗುವುದಿಲ್ಲ. ಆದರೆ ಸಣ್ಣ-ಪುಟ್ಟ ವಿಚಾರಗಳಲ್ಲಿ ಭಯ, ಭಕ್ತಿ ಜಾಸ್ತಿ ಎಂದು ಹಾಸ್ಯ ಮಾಡುತ್ತಾರೆ.

ಇದೇ ವೇಳೆ ದಿವ್ಯಾ ಉರುಡುಗ ನಾನು ನಿಜವಾಗಿಯೂ ಹೆದರುವುದಿಲ್ಲ. ನಾನು ಯಾಕೆ ಹೆದರಲಿ, ನಮ್ಮ ಅಪ್ಪ, ಅಮ್ಮ ನನ್ನನ್ನು ಹಾಗೇ ಬೆಳೆಸಿಲ್ಲ. ನೀನು ಯಾವಾಗಲೂ ಹೆದರಬಾರದು ಧೈರ್ಯವಾಗಿರಬೇಕು ಎಂದು ಕಲಿಸಿದ್ದಾರೆ. ನಾನು ಹೆದರಲ್ಲ ಎನ್ನುತ್ತಾರೆ. ಆಗ ಸುದೀಪ್ ಅದನ್ನು ಕೂಡ ಅಷ್ಟು ಕಷ್ಟಪಟ್ಟು ಹೇಳುತ್ತಿದ್ದೀರಾ, ಧೈರ್ಯವಾಗಿ ಹೇಳುತ್ತಿಲ್ಲ ಎಂದು ವ್ಯಂಗ್ಯವಾಡುತ್ತಾರೆ.

ಇದರಿಂದ ತಬ್ಬಿಬ್ಬಾದ ದಿವ್ಯಾ ಉರುಡುಗ, ಸರ್ ನಾನು ಯಾಕೆ ಹೆದರಲಿ ಎಂದು ಕೇಳುತ್ತಾರೆ, ಹಾಗಾದರೆ ಮುಖ ನೋಡಿ ಹೇಳಿ ನಿನಗೇನೋ ಹೆದರುವುದು, ಏನ್ ನಿನ್ನನ್ನು ನೋಡಿ ಹೆದರುವುದು ಅಂತ ಹೇಳಿ ಎಂದು ಹೇಳಿಕೊಡುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ನಿಮ್ಮನ್ನ ನೋಡಿ ನಾನು ಯಾಕೆ ಹೆದರಿಕೊಳ್ಳಲಿ ಎನ್ನುತ್ತಾರೆ. ಆಗ ಸುದೀಪ್ ನಿಮ್ಮನ್ನು ಅಲ್ಲ. ಏನೋ ನಿನ್ನನ್ನು ನೋಡಿ ಹೆದರುವುದು ಎಂದು ಅವಾಜ್ ಹಾಕಲು ಹೇಳುತ್ತಾರೆ.

ಆಗ ದಿವ್ಯಾ ಉರುಡುಗ ನಾಚುತ್ತಾ ನಾನು ಅವರಿಕೆ ಏಕವಚದಲ್ಲಿ ಮಾತನಾಡಿಯೇ ಇಲ್ಲ ಎಂದು ಹೇಳುತ್ತಾರೆ. ಈ ವೇಳೆ ಸುದೀಪ್ ಆ ಯೆಸ್ ಆರ್ ನೋ ಬೋರ್ಡ್ ತೆಗೆದುಕೊಂಡು ನಮಗೆ ಹೊಡೆದುಕೊಳ್ಳಬೇಕು ಎಂದು ಹೇಳುತ್ತಾ ನಗುತ್ತಾರೆ.  ಇದನ್ನೂ ಓದಿ:ಡವ್ ರಾಣಿ ಮಗಳು ಅಂದ ಶಮಂತ್‍ಗೆ ವೈಷ್ಣವಿ ವಾರ್ನ್

The post ನಾನು ಇಲ್ಲಿವರೆಗೂ ಅವರನ್ನು ಏಕವಚನದಲ್ಲಿ ಕರೆದಿಲ್ಲ – ದಿವ್ಯಾ appeared first on Public TV.

Source: publictv.in

Source link