‘ನಾನು ಎಂದಿಗೂ ಆರ್​​ಸಿಬಿಯನ್​​​’- ಕ್ರಿಕೆಟ್​​ ನಿವೃತ್ತಿ ಘೋಷಣೆ ಬೆನ್ನಲ್ಲೇ ABD ಭಾವುಕ ನುಡಿ


ಬೆಂಗಳೂರು: ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ವೈಸ್​​ ಕ್ಯಾಪ್ಟನ್​​ ಮತ್ತು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್, ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಸಂಬಂಧ ಮಾತಾಡಿದ ಎಬಿಡಿ, “ನಾನು ಕೊನೆಯವರೆಗೂ ಆರ್‌ಸಿಬಿ ಆಟಗಾರ. ಬೇರೆ ತಂಡದ ಪರ ಆಡುವುದಿಲ್ಲ ಎಂದರು.

ನಾನು ಆರ್‌ಸಿಬಿ ಆಟಗಾರನಾಗಿಯೇ ಉಳಿದಿದ್ದೇನೆ. ನನ್ನ ಈ ನಿರ್ಧಾರ ಬಹಳ ಬೇಸರ ತರಿಸಿದೆ. ಕೆಲವು ಅನಿವಾರ್ಯ ಕಾರಣಾಂತರಗಳಿಂದ ಈ ಡಿಸಿಷನ್​​ ತೆಗೆದುಕೊಂಡಿದ್ದೇನೆ. ನನಗೂ ಭಾರತದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ನನಗೂ ಆರ್​ಸಿಬಿಗೂ ಅವಿನಾಭಾವ ಸಂಬಂಧ. ಹಾಗಾಗಿ ಮುಂದೆಯೂ ಆರ್​​ಸಿಬಿಯೊಂದಿಗೆ ಇರುತ್ತೇನೆ ಎಂದು ಹೇಳಿದರು.

ನಾನು ಆರ್​​ಸಿಬಿ ಸೇರಿದ ಬಳಿಕ ಅರ್ಧ ಭಾರತೀಯನಾಗಿದ್ದೇನೆ. ಭಾರತವು ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ. ಇದೊಂದು ಅದ್ಭುತ ಪ್ರಯಾಣ. ನನಗೀಗ 37ನೇ ವರ್ಷ, ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ನನ್ನ ಮೇಲೆ ನೀವು ತೋರಿಸಿದ ಪ್ರೀತಿ ಚಿರಋಣಿ ಎಂದು ಭಾವುಕರಾದರು ಎಬಿಡಿ.

ಇದನ್ನೂ ಓದಿ: BIG BREAKING: ಆರ್​​ಸಿಬಿ ಫ್ಯಾನ್ಸ್​ಗೆ ಶಾಕ್; ಇನ್ನು ಬ್ಯಾಟ್ ಬೀಸಲ್ವಂತೆ ABD

News First Live Kannada


Leave a Reply

Your email address will not be published. Required fields are marked *