ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗಿರುವ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರೊಂದಿಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮಾತಾಡುತ್ತಾ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕುವ ಕುರಿತಾಗಿ ಮಾತಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗ ವಿಶ್ವನಾಥ್ ಈಗ ಸುದ್ದಿಗೋಷ್ಠಿ ನಡೆಸಿದರು.
ನಾನು ಎಲ್ಲಾ ಪಕ್ಷದವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೇನೆ. ಯಾರೊಂದಿಗೂ ನಾನು ದ್ವೇಷ ಹೊಂದಿಲ್ಲ. ನಾನು ಏಕಾಂಗಿಯಾಗಿಯೇ ಯಾವಾಗಲೂ ನನ್ನ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಇವನನ್ನು ಸೋಲಿಸೋಕೆ ಕಷ್ಟ. ನಮ್ಮತ್ರ ದುಡ್ಡಿಲ್ಲ, ಹಾಗಾಗಿ ಸೋಲಿಸೋಕೆ ಅಗಲ್ಲ. ಆದ್ದರಿಂದ 5 ಕೋಟಿ ದುಡ್ಡು ಕೊಡ್ತೀನಿ, ಮುಗಿಸಿಬಿಡೋಣ ಎಂದು ಮಾತಾಡಿಕೊಂಡಿದ್ದಾರೆ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ನಾನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಮಾತಾಡಿದ್ದೇನೆ. ಯಾರೇ ಇರಲಿ ತನಿಖೆ ಮಾಡಬೇಕು ಅಣ್ಣ ಎಂದು ಮಾತಾಡಿದ್ದೇನೆ. ಇವರು ನನ್ನ ಮುಗಿಸೋಕೆ ಬಹಳ ಪ್ಲಾನ್ ಮಾಡಿದ್ದರು. ಆಂಧ್ರದಿಂದ ಕರೆಸಿ ಹೊಡೆಸಬೇಕು, ಹೇಗಾದರೂ ಮುಗಿಸಬೇಕು. ಒಮ್ಮೆ ಒಂದು ಸಲ ಹೊಡೆದ್ರೆ, ಮತ್ತೆ ಬದುಕಬಾರದು ಎಂದು ಹೇಳ್ತಾನೆ ಎಂದರು.
ನನ್ನನ್ನು ಹಲವು ಬಾರಿ ಬೇಕಂತಲೇ ಜೈಲಿಗೆ ಕಳಿಸಿದ್ದಾರೆ. ನಾನು ಕೇಸ್ ಗೆದ್ದು ಬಂದಿದೀನಿ. ನನ್ನ ಕ್ಷೇತ್ರದ ಜನ ನನ್ನೊಂದಿಗೆ ಇದಾರೆ. ನಾನು ಒಂಟಿಯಾಗಿ ಓಡಾಡ್ತೀನಿ, ಯಾರಾದ್ರೂ ಬರಲಿ ನೋಡೋಣ ಎಂದು ಹೇಳಿದರು.
The post ‘ನಾನು ಒಂಟಿಯಾಗೇ ಓಡಾಡ್ತೀನಿ, ಬರಲಿ ನೋಡೋಣ’- S.R ವಿಶ್ವನಾಥ್ ಸವಾಲ್ appeared first on News First Kannada.