‘ನಾನು ಒಳ್ಳೆಯ ನಟನಾಗಲಿ ಅಂತ ಅಪ್ಪನಿಗೆ ಆಸೆ ಇತ್ತು’; ಸತ್ಯಜಿತ್​ ನಿಧನದ ಬಳಿಕ ಪುತ್ರ ಆಕಾಶ್​ ನೋವಿನ ಮಾತು | Sathyajith Death: Kannada senior actor Satyajit wanted his son Akash to become an actor

650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟ ಸತ್ಯಜಿತ್​ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 2 ಗಂಟೆ ಸುಮಾರಿಗೆ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ ಎಂದು ಟಿವಿ9ಗೆ ಸತ್ಯಜಿತ್ ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ. ತಂದೆಯ ನಿಧನದ ಬಳಿಕ ಆಕಾಶ್​ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

‘ಅಪ್ಪ ಒಳ್ಳೆಯ ವ್ಯಕ್ತಿ ಆಗಿದ್ದರು. ನಾನು ಕೂಡ ಒಳ್ಳೆಯ ನಟ ಆಗಬೇಕು ಎಂಬ ಆಸೆ ಅವರಿಗೆ ಇತ್ತು. ಅನೇಕ ಸಲಹೆ ನೀಡಿದ್ದರು. ಬೇಕಾದ ಎಲ್ಲ ತಯಾರಿಯನ್ನೂ ನನಗೆ ಕೊಟ್ಟಿದ್ದರು. ನಾವು ಮೂವರು ಮಕ್ಕಳು. ನಮಗೆ ಅವರು ಏನೂ ಕೊರತೆ ಮಾಡಿಲ್ಲ’ ಎಂದು ಆಕಾಶ್​ ಹೇಳಿದ್ದಾರೆ. ಹೆಗಡೆ ನಗರದ ಶಬರಿ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ.

 

TV9 Kannada

Leave a comment

Your email address will not be published. Required fields are marked *