ಶಿವಮೊಗ್ಗ: ನಾನು ಓದಿಲ್ಲ, ನೀನು ಆದ್ರೂ ಓದು ಅಂತಾ ಪತ್ನಿಯ ಶಿಕ್ಷಣಕ್ಕೆ ಪ್ರೇರಣೆ ನೀಡಿ ಕೆಎಎಸ್​​ ಓದಿಸಿದ್ದ ಪತಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ. ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ ಸೀನಾ. ನಾನಂತೂ ಓದಿಲ್ಲ, ಆದ್ದರಿಂದ ಚೆನ್ನಾಗಿ ಓದುತ್ತಿದ್ದ ತನ್ನ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿಸಬೇಕು‌ ಎಂದು ಕನಸುಕಂಡಿದ್ದ.

ಪತಿಯ ಬೆಂಬಲ ಪಡೆದ ಅಶ್ವಿನಿ ಅವರು ಕೂಡ ಮದುವೆ ಮುನ್ನ ಕೆಎಎಸ್​ ಪರೀಕ್ಷೆ ಎದುರಿಸಲು ಆರಂಭಿಸಿದ್ದ ಪೂರ್ವಬಾವಿ ತರಬೇತಿಯನ್ನು ಮುಂದುವರಿಸಿದ್ದರು. ಅಲ್ಲದೇ ಮದುವೆಯ ಬಳಿಕವೂ ಪರೀಕ್ಷೆಗೆ ಅಗತ್ಯವಿದ್ದ ತರಬೇತಿಯನ್ನು ಪಡೆದುಕೊಂಡು ಪರೀಕ್ಷೆ ಎದುರಿಸಿದ್ದರು. ಕಠಿಣ ಶ್ರಮದ ಫಲವಾಗಿ ಕಳೆದ ವರ್ಷ ಅಶ್ವಿನಿ ಕೆಎಎಸ್ ಪರೀಕ್ಷೆ ಪಾಸ್ ಮಾಡಿ ಆರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯನ್ನು ಪಡೆದುಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಸೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

The post ‘ನಾನು ಓದಿಲ್ಲ ನೀನು ಓದು’ ಅಂತಾ ಪತ್ನಿಯನ್ನ ಕೆಎಎಸ್​ ಮಾಡಿಸಿದ್ದ ಪತಿ ಕೊರೊನಾಗೆ ಬಲಿ appeared first on News First Kannada.

Source: newsfirstlive.com

Source link