ಬೆಳಗಾವಿ: ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಂಗಳಾ ಅಂಗಡಿ ಅವರು ರೋಚಕ ಗೆಲುವು ಪಡೆದಿದ್ದು, ಸುರೇಶ್​ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳೇ ತಮ್ಮ ಗೆಲುವಿಗೆ ಕಾರಣ ಎಂದು ಹೇಳಿದ್ದಾರೆ.

ಗೆಲುವಿನ ಬಳಿಕ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಮಂಗಳಾ ಅಂಗಡಿ ಅವರು, ಕೇಂದ್ರದ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲವು ಹಾಗೂ ಸುರೇಶ್ ಅಂಗಡಿ ಅವರ ಅಭಿವೃದ್ಧಿ ಕೆಲಸ ಕೈ ಹಿಡಿದಿದೆ. ಜನರು ನನ್ನ ಮೇಲೆ ವಿಶ್ವಾಸ ಇಟ್ಟು ಆರಿಸಿ ಕೊಟ್ಟಿದ್ದಾರೆ.‌ ಕ್ಷೇತ್ರದಲ್ಲಿ ದಿ. ಸುರೇಶ ಅಂಗಡಿ ಅವರು ಕೆಲಸ ಮುನ್ನಡೆಸಿಕೊಂಡ ಹೋಗುತ್ತೇನೆ. ನಾನು ಗೋಕಾಕ್ ಮನೆ ಮಗಳು.. ಹೀಗಾಗಿ ಮನೆ ಮಗಳನ್ನು ಗೆಲ್ಲಿಸಿದ್ದಾರೆ. ಗೋಕಾಕ್ನ ಜನರು ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ‌ ಎಂದರು.

ಕಡಿಮೆ ಸಮಯದಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಚುನಾವಣೆ ನಡೆದರೂ ಜನರು ನಮ್ಮ ಕೈ ಹಿಡಿದಿದ್ದಾರೆ. ಇದು ಐತಿಹಾಸಿಕ ಗೆಲುವಾಗಿದ್ದು, ಸುರೇಶ್​ ಅಂಗಡಿ ಅವರನ್ನು 4 ಬಾರಿ ಗೆಲ್ಲಿಸಿ ಕಳುಹಿಸಿದಂತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಕೊನೆಗೂ ಗೆಲುವು ನನ್ನದಾಗಿತ್ತು. ಆದರೆ ಮತಗಳ ಅಂತರ ಕಡಿಮೆ ಆಗುತ್ತೆ ಅಂದುಕೊಂಡಿರಲಿಲ್ಲ. ಗೆಲುವು ಖಚಿತ ಎಂಬುದನ್ನು ಮಾತ್ರ ಕಾರ್ಯಕರ್ತರು ಹೇಳಿದ್ದರು ಎಂದು ತಿಳಿಸಿದರು.

The post ‘ನಾನು ಗೋಕಾಕ್ ಮನೆ ಮಗಳು’- ರೋಚಕ ಗೆಲುವಿಗೆ ಭಾವುಕರಾದ ಮಂಗಳಾ ಅಂಗಡಿ appeared first on News First Kannada.

Source: newsfirstlive.com

Source link