ಬೆಂಗಳೂರು: ಚಾಮರಾಜಪೇಟೆಯ ಮಲೆಮಹದೇಶ್ವರ ದೇಗುಲಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮಲೇಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದೇಗುಲದಲ್ಲಿನ ತಾಳ ಬಡಿದು ಭಕ್ತಿ ಸಮರ್ಪಿಸಿದ್ದಾರೆ. ಈ ವೇಳೆ ಮಾತನಾಡಿ ದೇವಸ್ಥಾನದ ಸಮಿತಿಯವರು ಬಡವರಿಗೆ ಆಹಾರದ ಕಿಟ್ ವಿತರಿಸುತ್ತಿದ್ದು, ನೀವೆ ಬಂದು ವಿತರಿಸಬೇಕು ಎಂದು ಕೇಳಿಕೊಂಡಿದ್ದರಿಂದ ಬಂದಿದ್ದೇನೆ ಎಂದರು.

ಈ ವೇಳೆ ಚಾಮರಾಜಪೇಟೆಯ ಜೊತೆಗಿನ ನಂಟನ್ನು ಮೆಲುಕು ಹಾಕಿದ ಅವರು, ಪ್ರತಿ ವರ್ಷ ಶಿವರಾತ್ರಿ ದಿನ ನಾನು ಈ ದೇಗುಲಕ್ಕೆ ಬರ್ತೀನಿ. ಚಾಮರಾಜಪೇಟೆ ನಮ್ಮ ಊರಿದ್ದ ಹಾಗೆ, ಇಲ್ಲೇ ಸೆಕೆಂಡ್ ಮೇನ್ ರೋಡ್ ನಲ್ಲಿ ನನ್ನ ಮಾವನ ಮನೆ ಇದೆ, ನಾನು ಚಾಮರಾಜಪೇಟೆಯ ಅಳಿಯ. ಎಂಎಲ್ಎ ಆಗುವ ಮೊದಲು ಇಲ್ಲಿಗೆ ಬರ್ತಿದ್ದೆ ಈಗಲೂ ಬರ್ತಿದ್ದೇನೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ಇದಕ್ಕೂ ಮುನ್ನ ಬಸವನಗುಡಿಯ ಶ್ರೀನಗರದಲ್ಲಿ ಫುಡ್​ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪ ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಇದ್ದ ಹಾಗೆ. 15 ಹಣಕಾಸು ಆಯೋಗವೇ ಕರ್ನಾಟಕಕ್ಕೆ 5,495 ಕೋಟಿ ಸ್ಪೆಷಲ್ ಗ್ರಾಂಟ್ಸ್ ಗೆ ಶಿಫಾರಸು ಮಾಡಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೇ ಹಣಕಾಸು ಮಂತ್ರಿ. ಆದರೂ ಫೈನಾನ್ಸ್ ಕಮಿಷನ್ ಹೇಳಿದ ಅನುದಾನವನ್ನ ರಾಜ್ಯಕ್ಕೆ ತರಲು ಬಿಎಸ್​​ವೈಗೆ ಸಾಧ್ಯವಾಗಿಲ್ಲ. ನಾನಾಗಿದ್ರೆ ನಿರ್ಮಲಾ ಸೀತಾರಾಮನ್ ಕಚೇರಿ ಎದುರು ಧರಣಿ ಕುಳಿತುಕೊಳ್ತಿದ್ದೆ. ಕರ್ನಾಟಕಕ್ಕಾಗಿರುವ ಜಿಎಸ್​ಟಿ ನಷ್ಟಕ್ಕೆ ಕಮಿಷನ್ ಹೇಳಿರುವ ವಿಶೇಷ ಅನುದಾನ ಕೇಂದ್ರ ಸರ್ಕಾರ ಕೊಡಲೇಬೇಕು. ಮೋದಿ ಎದುರು ಹೋಗಿ ಮಾತಾಡುವ ಧೈರ್ಯ ಇವರಿಗಿಲ್ಲ ಎಂದು ಆರೋಪಿಸಿದರು.

The post ‘ನಾನು ಚಾಮರಾಜಪೇಟೆಯ ಅಳಿಯ’ -ಹಳೆ ನೆನಪುಗಳ ಬಿಚ್ಚಿಟ್ಟ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link