ನಾನು, ತಂದೆ-ತಾಯಿ, ನನ್ನ ಮಗ ಎಲ್ಲರೂ ಕೊರೊನಾ ಗೆದ್ದಿದ್ದೇವೆ.. ಭಯಬೇಡ- ಹೆಚ್​ಡಿಕೆ

ನಾನು, ತಂದೆ-ತಾಯಿ, ನನ್ನ ಮಗ ಎಲ್ಲರೂ ಕೊರೊನಾ ಗೆದ್ದಿದ್ದೇವೆ.. ಭಯಬೇಡ- ಹೆಚ್​ಡಿಕೆ

ಬೆಂಗಳೂರು: ಕೊರೊನಾ ಸೋಂಕು ಏರಿಕೆಯಾಗುತ್ತಿರಯುವ ಹಿನ್ನೆಲೆ ಕೆಲವೆಡೆ ಜನರು ವಿನಾಕಾರಣ ಆತಂಕಕ್ಕೊಳಗಾಗುತ್ತಿರುವ ಘಟನೆಗಳು ವರದಿಯಾಗಿವೆ. ಕೆಲವರು ಕೊರೊನಾದಿಂದ ಸಾವನ್ನಪ್ಪಿದ್ರೆ ಕೆಲವರು ಆತಂಕದಿಂದಲೇ ಮಾನಸಿಕವಾಗಿ ಕುಗ್ಗಿ ಹೋಗ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

ಕೊರೊನಾ ಸೋಂಕಿನ ಕುರಿತು ವಿಡಿಯೋ ಮೂಲಕ ಮಾತನಾಡಿರುವ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ.. ಯಾರೂ ಅಧೈರ್ಯಗೊಳ್ಳಬೇಡಿ. ನಾನೊಬ್ಬನೇ ಅಲ್ಲ, ನಮ್ಮ ಕುಟುಂಬದಲ್ಲಿ ನನ್ನ ತಂದೆ-ತಾಯಿ, ನನ್ನ ಮಗ ನಾವೆಲ್ರೂ ಕೊರೊನಾ ಪಾಸಿಟಿವ್​ನಿಂದ ಹೊರಗೆ ಬಂದಿದ್ದೇವೆ. ಯಾರೂ ಹೆದರದೆ ಮಾನಸಿಕವಾಗಿ, ಸ್ಥೈರ್ಯಯುತವಾಗಿ ಎದುರಿಸುವ ಮೂಲಕ ಕೋವಿಡ್ ಗೆಲ್ಲುವಂಥ ಮನಸ್ಥೈರ್ಯ ಬೆಳೆಸಿಕೊಳ್ಳಿ.

The post ನಾನು, ತಂದೆ-ತಾಯಿ, ನನ್ನ ಮಗ ಎಲ್ಲರೂ ಕೊರೊನಾ ಗೆದ್ದಿದ್ದೇವೆ.. ಭಯಬೇಡ- ಹೆಚ್​ಡಿಕೆ appeared first on News First Kannada.

Source: newsfirstlive.com

Source link