ಬೆಳಗಾವಿ: ದಿ. ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಗಳಾ ಅಂಗಡಿಯವರ ಹಿರಿಯ ಪುತ್ರಿ ಸ್ಫೂರ್ತಿ.. ಅಮ್ಮ ಗೆದ್ದಿರುವುದು ಒಂದ್ಕಡೆ ಖುಷಿಯಾಗುತ್ತೆ.. ತಂದೆಯನ್ನೂ ಬಹಳ ಮಿಸ್​ ಮಾಡ್ಕೊತೀವಿ.. ಬೆಳಗಾವಿ ಕ್ಷೇತ್ರದ ಜನರು ನಮ್ಮ ತಾಯಿಯವರ ಮೇಲೆ ಬಹಳ ವಿಶ್ವಾಸ ಇಟ್ಟು ಗೆಲ್ಲಿಸಿಕೊಟ್ಟಿದ್ದಾರೆ.

ಇದು ಮೊದಲ ಮಹಿಳಾ ಎಂಪಿ ಬೆಳಗಾಂನಿಂದ.. ಜನರು ಯಾವ ವಿಶ್ವಾಸ ಇಟ್ಟುಕೊಂಡು ಗೆಲ್ಲಿಸಿಕೊಟ್ಟಿದ್ದಾರೋ ಅದೇ ವಿಶ್ವಾಸದಿಂದ ಎಲ್ಲ ಕೆಲಸವನ್ನೂ ಮಾಡ್ತೀವಿ. ಬೆಳಗ್ಗೆಯಿಂದಲೂ ಟಿ ವಿ ನೋಡ್ತಿದ್ವಿ.. ನೆಕ್​ ಟು ನೆಕ್ ಫೈಟ್ ಇತ್ತು.. ಆದರೂ ನಮಗೆ ಗೆಲ್ಲುವ ವಿಶ್ವಾಸ ಇತ್ತು. ನಮಗೆ ಸೆಂಟರ್ ಮತ್ತು ಸ್ಟೇಟ್ ಎಲ್ಲ ಕಡೆಯಿಂದಲೂ ಸಪೋರ್ಟ್ ಇತ್ತು. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಾನು ನನ್ನ ತಂಗಿ ನಮ್ಮ ಅಮ್ಮನಿಗೆ ಎಲ್ಲ ರೀತಿಯ ಸಪೋರ್ಟ್ ಮಾಡ್ತೇವೆ ಎಂದಿದ್ದಾರೆ.

The post ನಾನು ನನ್ನ ತಂಗಿ, ಅಮ್ಮನಿಗೆ ಎಲ್ಲಾ ರೀತಿಯ ಸಪೋರ್ಟ್ ಮಾಡ್ತೇವೆ- ಮಂಗಳಾ ಅಂಗಡಿ ಪುತ್ರಿ appeared first on News First Kannada.

Source: newsfirstlive.com

Source link