‘ನಾನು ನನ್ನ ತಂಡಕ್ಕೆ ಅಪ್ರಾಮಾಣಿಕನಾಗಲು ಸಾಧ್ಯವಿಲ್ಲ’ -ವಿರಾಟ್​​ ಕೊಹ್ಲಿ ಭಾವುಕ ಪತ್ರ


ಕಳೆದ 30 ವರ್ಷಗಳ ಅವಧಿಯಲ್ಲಿ ಗೆಲ್ಲಲ್ಲು ಸಾಧ್ಯವಾಗದ ಸಿರೀಸ್​​ ಗೆಲುವುವನ್ನು ಈ ಬಾರಿ ಆದ್ರೂ ಗೆಲ್ಲಲೇ ಬೇಕು ಎಂದು ಹೊರಟ ಟೀಂ ಇಂಡಿಯಾ ತಂಡಕ್ಕೆ ನಿರಾಸೆ ಎದುರಾಗಿತ್ತು. ಆದರೆ ಈ ಟೆಸ್ಟ್​ ಸರಣಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಅವರ ಭವಿಷ್ಯವನ್ನು ರಿಸ್ಕ್​​ಗೆ ನೂಕಿತ್ತು. ಇದರ ಬೆನ್ನಲ್ಲೇ ವಿರಾಟ್​​ ಕೊಹ್ಲಿ ಎಲ್ಲರನ್ನು ಅಚ್ಚರಿಗೆ ದೂಡಿ ಟೀಂ ಇಂಡಿಯಾ ಟೆಸ್ಟ್​ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಈ ಕುರಿತು ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿರಾಟ್​ ಕೊಹ್ಲಿ, ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಭಾವುಕರಾಗಿ ಅಭಿಮಾನಿಗಳು, ಬಿಸಿಸಿಐ, ಮಾಜಿ ಕೋಚ್ ರವಿ ಶಾಸ್ತ್ರಿ, ಮಾಜಿ ಆಟಗಾರ ಎಂಎಸ್​ ಧೋನಿ ಹಾಗೂ ತಂಡದ ಸಹ ಆಟಗಾರರಿಗೆ ಧನ್ಯವಾದ ತಿಳಿಸಿದ್ದಾರೆ.

‘ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ’

ಸುಮಾರು 7 ವರ್ಷಗಳಾಯ್ತು. ಸಾಕಷ್ಟು ಹಾರ್ಡ್‌ವರ್ಕ್‌ ಮಾಡಿ, ಪ್ರತಿನಿತ್ಯ ಶ್ರಮ ಹಾಕಿ, ಶಕ್ತಿಯನ್ನ ಉಳಿಸಿಕೊಂಡು ತಂಡವನ್ನು ಸರಿಯಾದ ದಿಕ್ಕಿನಲ್ಲಿ ನಡೆಸೋಕೆ ಶ್ರಮಪಟ್ಟಿದ್ದೇನೆ. ನನ್ನ ಕೆಲಸವನ್ನ ಬಹಳ ಪ್ರಾಮಾಣಿಕವಾಗಿ ಮಾಡಿದ್ದೇನೆ. ಏನನ್ನೂ ಬಾಕಿ ಉಳಿಸಿಲ್ಲ ಅಂದುಕೊಂಡಿದ್ದೇನೆ. ಎಲ್ಲವೂ ಕೂಡ ಒಂದಲ್ಲ ಒಂದು ದಿನ ಅಂತ್ಯವಾಗಲೇಬೇಕು. ಟೀಮ್‌ ಇಂಡಿಯಾದ ಟೆಸ್ಟ್‌ ಕ್ಯಾಪ್ಟನ್‌ ಆಗಿ ಇವತ್ತು ನನಗೆ ಆ ಸಮಯ ಬಂದಿದೆ.

ಈ ಜರ್ನಿಯಲ್ಲಿ ಬಹಳಷ್ಟು ಸಕ್ಸಸ್‌ಗಳನ್ನೂ ಕಂಡಿದ್ದೇನೆ. ಕೆಲವೊಮ್ಮೆ ಫೆಲ್ಯೂರ್‌ ಕೂಡ ಆಗಿದ್ದೇನೆ. ಆದ್ರೆ ಯಾವತ್ತೂ ನಂಬಿಕೆಯನ್ನ ಕಳೆದುಕೊಂಡಿಲ್ಲ. ನನ್ನ ಶ್ರಮದಲ್ಲಿ ಯಾವುದೇ ರೀತಿಯ ಕೊರತೆ ಮಾಡಿಲ್ಲ. ಯಾವತ್ತೂ ನಾನು ಮಾಡೋ ಕೆಲಸದಲ್ಲಿ ನನ್ನ 120 ಪರ್ಸೆಂಟ್‌ ಶ್ರಮ ಹಾಕೋದ್ರಲ್ಲಿ ನಂಬಿಕೆ ಇಟ್ಟವನು. ಒಂದುವೇಳೆ ನನಗೆ ಅದನ್ನ ಕೊಡೋಕೆ ಸಾಧ್ಯವಾಗದಿದ್ರೆ ಅದು ಸರಿಯಾದ ಕೆಲಸವಲ್ಲ ಅಂತ ನನಗೆ ಗೊತ್ತು. ನನ್ನ ಹೃದಯದಲ್ಲಿ ಸ್ಪಷ್ಟವಾದ ನಿಖರತೆ ಇದೆ. ನಾನು ನನ್ನ ತಂಡಕ್ಕೆ ಅಪ್ರಾಮಾಣಿಕನಾಗಲು ಸಾಧ್ಯವಿಲ್ಲ.

ಇಷ್ಟು ದೀರ್ಘ ಅವಧಿಯ ಕಾಲ ಭಾರತ ತಂಡವನ್ನು ಮುನ್ನಡೆಸೋಕೆ ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಧನ್ಯವಾದಗಳು. ಜೊತೆಗೆ ನನ್ನೆಲ್ಲಾ ಟೀಮ್‌ ಮೇಟ್‌ಗಳಿಗೂ ಧನ್ಯವಾದ ತಿಳಿಸೋಕೆ ಇಚ್ಛಿಸುತ್ತೇನೆ. ನೀವೆಲ್ಲರೂ ನಾನು ತಂಡಕ್ಕಾಗಿ ಕಂಡ ವಿಶನ್‌ನ ನಿಜವಾಗಿಸಲು ಶ್ರಮಿಸಿದ್ದೀರಿ. ಯಾವತ್ತೂ ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಟ್ಟಿಲ್ಲ. ನನ್ನ ಈ ಜರ್ನಿಯನ್ನ ನೀವೆಲ್ಲರೂ ಬಹಳ ಸ್ಮರಣದಾಯಕವಾಗಿಸಿದ್ದೀರಿ, ಸುಂದರವಾಗಿಸಿದ್ದೀರಿ.

ರವಿ ಭಾಯ್‌ಗೆ ಮತ್ತು ಎಲ್ಲಾ ಸಪೋರ್ಟಿಂಗ್‌ ಸ್ಟಾಫ್‌ಗೆ ಯಾರೆಲ್ಲಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಮ್ಮ ವಾಹನ ಎತ್ತರಕ್ಕೆ ಏರಲು ಎಂಜಿನ್‌ನ ಬಲಪಡಿಸಿದ್ರೋ, ನೀವೆಲ್ಲರೂ ನನ್ನ ವಿಶನ್‌ಗೆ ಜೀವ ತುಂಬುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದೀರಿ. ಕೊನೆಯದಾಗಿ ಎಂಎಸ್‌ ಧೋನಿ ಅವರಿಗೆ ತುಂಬು ಹೃದಯದ ಧನ್ಯವಾದ. ನನ್ನನ್ನ ಒಬ್ಬ ನಾಯಕನಾಗಿ ನಂಬಿದ್ದಕ್ಕೆ, ಭಾರತೀಯ ಕ್ರಿಕೆಟ್‌ನ ಮುಂದಕ್ಕೆ ಕರೆದೊಯ್ಯಲು ನಾನೊಬ್ಬ ಸಮರ್ಥ ವ್ಯಕ್ತಿ ಅಂತ ಗುರುತಿಸಿದ್ದಕ್ಕೆ ಧನ್ಯವಾದಗಳು.

ವಿರಾಟ್‌ ಕೊಹ್ಲಿ, ಕ್ರಿಕೆಟಿಗ

News First Live Kannada


Leave a Reply

Your email address will not be published. Required fields are marked *