ಮಿಸ್ಟರ್ 360 ಡಿಗ್ರಿ ಮತ್ತು ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಪ್ರತಿಭೆ ಎಬಿ ಡಿವಿಲಿಯರ್ಸ್ ಇಂದು ಎಲ್ಲಾ ಮಾದರಿಯ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಆರ್ಸಿಬಿ ಫ್ಯಾನ್ಸ್ಗೆ ನಿರಾಸೆ ಮೂಡಿಸಿದ್ದಾರೆ. ಹೀಗಿದ್ದರೂ ತಾನು ಕೊನೆಯವರೆಗೂ ಆರ್ಸಿಬಿ ಮತ್ತು ಕೊಹ್ಲಿಗೆ ಸಪೋರ್ಟ್ ಮಾಡುವುದಾಗಿ ತಿಳಿಸಿದ್ದಾರೆ.
ಈಗ ಎಬಿಡಿ ಐಪಿಎಲ್ಗೂ ನಿವೃತ್ತಿ ಘೋಷಿಸಿದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ಗಮಿತ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ನೀವು ಆರ್ಸಿಬಿ ತಂಡಕ್ಕಾಗಿ ಎಲ್ಲವನ್ನೂ ನೀಡಿದ್ದೀರಿ. ಇದು ನನ್ನ ಹೃದಯಕ್ಕೆ ಗೊತ್ತಿದೆ. ಈ ಫ್ರಾಂಚೈಸಿಗೆ ಹಾಗೂ ನನಗೆ ನೀವು ಏನೆಂಬುದನ್ನು ಪದಗಳಲ್ಲಿ ಅರ್ಥೈಸಲು ಸಾಧ್ಯವಿಲ್ಲ ಎಂದರು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನಿಮಗಾಗಿ ಹುರಿದುಂಬಿಸುವುದನ್ನ ತಪ್ಪಿಸುತ್ತದೆ. ನಾನು ನಿಮ್ಮೊಂದಿಗೆ ಆಟವಾಡುವುದನ್ನ ಕಳೆದುಕೊಳ್ಳುತ್ತೇನೆ ಗೆಳೆಯ. ಐ ಲವ್ ಯೂ ಹಾಗೂ ನಾನು ಯಾವಾಗಲೂ ನಿಮ್ಮ ನಂ.1 ಅಭಿಮಾನಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘RCB ಫ್ಯಾನ್ಸ್ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗದು, ನಾನು ಎಂದಿಗೂ ಕೊಹ್ಲಿ ಸಪೋರ್ಟರ್’- ABD