‘ನಾನು ಪದ್ಮಶ್ರೀ ಹಿಂದುರಿಗಿಸಲು ಸಿದ್ಧ, ಆದರೆ..’- ಕಂಗನಾ ರಣಾವತ್​​ ಹಾಕಿದ ಕಂಡೀಷನ್​​ ಏನು?


“2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶಕ್ಕೆ ನೈಜ ಸ್ವಾತಂತ್ರ್ಯ ಬಂದಿದ್ದು, 1947ರಲ್ಲಿ ಅಲ್ಲ” ಎಂದು ಬಾಲಿವುಡ್​​ ನಟಿ ಕಂಗನಾ ರಣಾವತ್​​​​​ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಕಂಗನಾಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಪಡೆಯಿರಿ ಎಂದು ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷದ ನಾಯಕರು ಕೇಂದ್ರಕ್ಕೆ ಒತ್ತಾಯಿಸಿ ಸೋಷಿಯಲ್​​ ಮೀಡಿಯಾದಲ್ಲಿ ಕ್ಯಾಂಪೇನ್​​ ಮಾಡಿದ್ದರು. ಈ ವಿಚಾರ ತಾರಕಕ್ಕೇರುತ್ತಿದ್ದಂತೆಯೇ ಕಂಗನಾ ರಣಾವತ್​​​ ಪದ್ಮಶ್ರೀ ಪ್ರಶಸ್ತಿ ಮರಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ಈ ಸಂಬಂಧ ತನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದು ಹಾಕಿರುವ ಕಂಗನಾ ರಣಾವತ್​​, ನಾನು ಪದ್ಮಶ್ರೀ ಪ್ರಶಸ್ತಿ ವಾಪಸ್ಸು ನೀಡಲು ತಯಾರಿದ್ದೇನೆ. ಆದರೆ, ನನಗೆ 1947ರಲ್ಲಿ ಯಾವ ಸ್ವಾತಂತ್ರ ಸಂಗ್ರಾಮ ನಡೆಯಿತು ಎಂದು ಬಿಡಿಸಿ ಹೇಳಬೇಕು. ನನಗೆ ಗೊತ್ತಿರುವಂತೆ 1857ರ ದಂಗೆಯನ್ನು ಭಾರತೀಯ ಸ್ವಾತಂತ್ರ್ಯದ ಮೊದಲ ಸಂಗ್ರಾಮ ಎಂದು ಕರೆಯುತ್ತಾರೆ. ಈ ದೇಶಕ್ಕೆ ಸ್ವಾತಂತ್ರ ಬಂದಿದ್ದು ಸುಭಾಷ್​ ಚಂದ್ರಬೋಸ್​​, ವೀರ ಸಾವರ್ಕರ್​​, ರಾಣಿ ಲಕ್ಷ್ಮೀಬಾಯಿ ನಾಯಕತ್ವದಲ್ಲಿ ಎಂದು ಬರೆದುಕೊಂಡಿದ್ದಾರೆ.

ನನಗೆ 1857ರ ದಂಗೆ ಅಂದರೆ ಭಾರತೀಯ ಸ್ವಾತಂತ್ರ್ಯದ ಮೊದಲ ಸಂಗ್ರಾಮದ ಬಗ್ಗೆ ಅರಿವಿದೆ. 1947ರಲ್ಲಿ ಏನು ನಡೀತು ಎಂಬ ಬಗ್ಗೆ ಗೊತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿ ವಾಪಸ್ಸು ಪಡೆಯಿರಿ; ಕೇಂದ್ರದ ವಿರುದ್ಧ ಕಾಂಗ್ರೆಸ್​ ಅಭಿಯಾನ

News First Live Kannada


Leave a Reply

Your email address will not be published. Required fields are marked *