ಮೈಸೂರು: “ನಾನು ಬೆಳೆದದ್ದೇ ರಾಜಕುಮಾರ್​​​​ ಕುಟುಂಬದಿಂದ, ನಾವ್ಯಾರು ದೊಡ್ಮನೆ ಹುಲ್ಲಿಗೂ ಸಮ ಇಲ್ಲ” ಎಂದು ನಟ ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​​ ಹೇಳಿದ್ದಾರೆ. ದೊಡ್ಮನೆ ಆಸ್ತಿ ವಿವಾದ ವಿಚಾರವಾಗಿ ಮಾಧ್ಯಮವರೊಂದಿಗೆ ಮಾತಾಡಿದ ದರ್ಶನ್, 25 ಕೋಟಿ ರೂಪಾಯಿ ಮ್ಯಾಟರ್​​ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ನಿರ್ಮಾಪಕ ಉಮಾಪತಿ ದೊಡ್ಮನೆ ಪ್ರಾಪರ್ಟಿ ವಿಚಾರ ತಂದಿದ್ದರಿಂದಲೇ ನಾನು ಈಗ ಸುದ್ದಿಗೋಷ್ಠಿ ಮಾಡ್ತಿದೀನಿ, ನಾವ್ಯಾರು ರಾಜಕುಮಾರ್​​​​ ಫ್ಯಾಮೀಲಿ ಹುಲ್ಲಿಗೂ ಸಮ ಇಲ್ಲ ಎಂದರು. 

ಕನ್ನಡ ಫಿಲ್ಮಂ ಇಂಡಸ್ಟ್ರೀ ಯಾರಪ್ಪನೂ ಸ್ವತ್ತು ಅಲ್ಲ. ನಾನು ಮತ್ತು ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ರಾಜಕುಮಾರ್​​​ ಕುಟಂಬದಲ್ಲೇ ಬೆಳೆದಿದ್ದು. ದೊಡ್ಮನೆ ಕುಂಟಬದ ಅನ್ನ ತಿಂದಿದ್ದೇವೆ, ನಾವ್ಯಾರು ಅವರ ಹುಲ್ಲಿಗೂ ಸಮ ಇಲ್ಲ. ನನ್ನ ಶ್ರಮ ನನ್ನದು, ರಾಜಕುಮಾರ್​​ ಕುಟುಂಬದ ಶ್ರಮ ಅವರದ್ದು. ಪುನೀತ್​​ ಮತ್ತು ರಾಘಣ್ಣನ ಹೆಸರು ಸುಮ್ಮನೇ ಬರ್ತಿದೆ ಎಂದರು ಹೇಳಿದ್ದಾರೆ.

ರಾಜಕುಮಾರ್​​ ಬ್ಯಾನರ್​ನಿಂದ ನಾನು ಲೈಟ್​ ಬಾಯ್​ ಆಗಿ ಕೆಲಸ ಶುರು ಮಾಡಿದ್ದು. ದೊಡ್ಮನೆ ಯಾವತ್ತಿದ್ರೂ ದೊಡ್ಮನೆಯೇ. ನಾವ್ಯಾಕೇ ಅವರ ಆಸ್ತಿ ಮೇಲೆ ಕಣ್ಣಾಕೋಣ. ಈ ಪ್ರಕರಣಕ್ಕೂ ಪುನೀತ್​​​ ರಾಜಕುಮಾರ್​​, ರಾಘಣ್ಣನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

The post ನಾನು ಬೆಳೆದದ್ದೇ ರಾಜಕುಮಾರ್​​ ಫ್ಯಾಮಿಲಿಯಿಂದ.. ನಾವ್ಯಾರೂ ಅವರ ಮುಂದೆ ಹುಲ್ಲಿಗೂ ಸಮವಲ್ಲ- ದರ್ಶನ್ appeared first on News First Kannada.

Source: newsfirstlive.com

Source link