ಬೆಳಗಾವಿ: ನಾನು ಮಂತ್ರಿಯಾಗಬೇಕೆಂದು ಬಿಜೆಪಿಗೆ ಬಂದವನಲ್ಲ, ರಾಜಕೀಯ ವಿದ್ಯಮಾನಗಳಲ್ಲಿ ಬಂದಂತವನು. ಎರಡು ವರ್ಷಗಳಿಂದ ಬಿಜೆಪಿಯಲ್ಲಿ ನನಗೆ ತೃಪ್ತಿ ಇದೆ ಎಂದು ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಪುಟ ಪುನರಾಚನೆ ಆದರೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂತ್ರಿ ಸ್ಥಾನ ಕೊಟ್ಟರೆ ಒಂದು ರೀತಿ ನೆಮ್ಮದಿ ಬರುತ್ತೆ ಎಂದರು.

ನನಗೆ ಹಲವು ಜವಾಬ್ದಾರಿ ಕೊಟ್ಟಿದ್ದಾರೆ, ಬಿಜೆಪಿ ಸಂಘಟನೆ ಮಾಡುತ್ತಿದ್ದೇವೆ. ಸಾಂದರ್ಭಿಕವಾಗಿ ಸಿಎಂ, ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ. ನಾನು ಬಿಜೆಪಿಗೆ ಬಂಬ ಬಳಿಕ ಪಕ್ಷ ಕಟ್ಟುವ ವಿಚಾರದಲ್ಲಿ ಇದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: 1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

ಮಂತ್ರಿ ಸ್ಥಾನ ಕೊಟ್ಟರೆ ಒಂದು ರೀತಿ ನೆಮ್ಮದಿ ಬರುತ್ತೆ. ಮಂತ್ರಿ ಸ್ಥಾನ ನೀಡುವಲ್ಲಿ ಸಮಸ್ಯೆ ಬಂದಿರಬಹುದು. ಒಂದೇ ಜಿಲ್ಲೆಯಲ್ಲಿ ಹಲವಾರು ಜನರನ್ನ ಮಂತ್ರಿ ಮಾಡೋದು ಬಂದಿರಬಹುದು. ಏನಪ್ಪಾ ನೀನು ನಮ್ಮವನಿದ್ಯಾ ಸ್ವಲ್ಪ ಸುಮ್ಮನಿರು ಅಂತಾ ಬಿಎಸ್‍ವೈ ಬಿಟ್ಟಿರಬಹುದು. ಮುಂದಿನ ದಿನಗಳಲ್ಲಿ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳಬಹುದು ಎಂದು ಮಂತ್ರಿ ಆಗಬೇಕೆಂಬ ಆಸೆಯನ್ನು ಮಹೇಶ್ ಕುಮಟಳ್ಳಿ ಬಿಚ್ಚಿಟ್ಟರು.

The post ನಾನು ಮಂತ್ರಿಯಾಗಬೇಕೆಂದು ಬಿಜೆಪಿಗೆ ಬಂದವನಲ್ಲ: ಮಹೇಶ್ ಕುಮಟಳ್ಳಿ appeared first on Public TV.

Source: publictv.in

Source link