ನಾನು ಮಂತ್ರಿ ಆಗಿರುವಾಗ ನನ್ನ ಮಗ ಎಂಎಲ್​ಸಿ, ಎಂಎಲ್ಎ ಆಗಬಾರದು; ಇದು ನನ್ನ ವೈಯಕ್ತಿಕ ನಿರ್ಧಾರವೆಂದ ಸಚಿವ ಈಶ್ವರಪ್ಪ | KS Eshwarappa has said that my son should not be an MLC and MLA when I am a minister in shivamogga


ನಾನು ಮಂತ್ರಿ ಆಗಿರುವಾಗ ನನ್ನ ಮಗ ಎಂಎಲ್​ಸಿ, ಎಂಎಲ್ಎ ಆಗಬಾರದು; ಇದು ನನ್ನ ವೈಯಕ್ತಿಕ ನಿರ್ಧಾರವೆಂದ ಸಚಿವ ಈಶ್ವರಪ್ಪ

ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)

ಶಿವಮೊಗ್ಗ: ಡಿಸೆಂಬರ್ 10ರಂದು ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ (KS Eshwarappa) ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಕೋರ್ ಕಮಿಟಿ ಸಭೆಯಲ್ಲೇ ಅಂತಿಮವಾಗಿದೆ. ಕೇಂದ್ರ ನಾಯಕರಿಗೆ ಪಟ್ಟಿಯನ್ನು ರವಾನೆ ಮಾಡಲಾಗಿದೆ. ಇನ್ನೆರಡು ದಿನದಲ್ಲಿ ಕೇಂದ್ರ ನಾಯಕರಿಂದ ಪಟ್ಟಿ ಬಿಡುಗಡೆಯಾಗಲಿದೆ. ನನ್ನ ಪುತ್ರ ಕೆಇ ಕಾಂತೇಶ್ ಸ್ಪರ್ಧೆ ಬೇಡವೆಂದು ಹೇಳಿದ್ದೇನೆ. ಅದನ್ನು ಅವರು ಒಪ್ಪುತ್ತಾರೆಂಬ ವಿಶ್ವಾಸ ನನಗಿದೆ ಅಂತ ಹೇಳಿಕೆ ನೀಡಿದ್ದಾರೆ.

ನಾನು ಮಂತ್ರಿಯಾಗಿರುವ ಸಮಯದಲ್ಲಿ ನನ್ನ ಮಗ ಎಂಎಲ್​ಸಿ, ಎಂಎಲ್ಎ ಆಗಬಾರದು ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ಈಗಾಗಲೇ ಮಗನಿಗೆ ಟಿಕೆಟ್ ಬೇಡ ಅಂತಾ ಕೋರ್ ಕಮೀಟಿಗೆ ತಿಳಿಸಿರುವೆ. ಅದನ್ನು ಅವರು ಒಪ್ಪುತ್ತಾರೆ ಎನ್ನುವ ವಿಶ್ವಾಸ ಇದೆ. ಪಕ್ಷದ ತೀರ್ಮಾನಕ್ಕೆ ನಾವು ಎಲ್ಲರೂ ಬದ್ಧವಾಗಿ ಇರುತ್ತವೆ. ಎಂಎಲ್​ಸಿ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಬಿಜೆಪಿ ಗೆಲುವು ಸಾಧಿಸಲಿದೆ ಅಂತ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮುಂದುವರಿದು ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ನಾಯಕರಿಗೆ ಮಾಡುವುದಕ್ಕೆ ಉದ್ಯೋಗವಿಲ್ಲ. ಹೀಗಾಗಿ ಬಿಟ್ ಕಾಯಿನ್ ವಿಚಾರ ಎತ್ತಿಕೊಂಡಿದ್ದಾರೆ. ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿ ನಾಯಕರು ಇಲ್ಲ. ಬಿಜೆಪಿ ನಾಯಕರಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ದಾಖಲೆ ಕೊಟ್ಟರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್​ನವರು ಖಾಲಿ ಡಬ್ಬ ಹೊಡೆಯುತ್ತಿದ್ದಾರೆ ಅಂತ ಕಿಡಿಕಾರಿದರು.

ಇದನ್ನೂ ಓದಿ

Borewell: ಬೋರ್​ವೆಲ್ ಕೊರೆಯಿಸೇ ಇಲ್ಲ, ಜೆಸಿಬಿಯಲ್ಲಿ ಗುಂಡಿ ತೋಡಿ ಬಿಲ್ ಮಂಜೂರು ಆರೋಪ!

ಚಿತ್ರದುರ್ಗ ಹೊಳಲ್ಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

TV9 Kannada


Leave a Reply

Your email address will not be published. Required fields are marked *