‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್ | Serial Actor Chandan Kumar walk out from Telugu Serial Srimathi Srinivas


ಇಂದು (ಜುಲೈ 1) ಸಂಜೆ ಸುದ್ದಿಗೋಷ್ಠಿ ಕರೆದು ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಸುದ್ದಿಗೋಷ್ಠಿಯಲ್ಲಿ ಅವರು ಧಾರಾವಾಹಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದಾರೆ.  

ತೆಲುಗಿನ ‘ಶ್ರೀಮತಿ ಶ್ರೀನಿವಾಸ್​’ ಧಾರಾವಾಹಿ ಶೂಟಿಂಗ್ ವೇಳೆ ಕಿರಿಕ್ ನಡೆದಿತ್ತು. ‘ಚಂದನ್ ಕುಮಾರ್ (Chandan Kumar) ಅವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಧಾರಾವಾಹಿ ತಂತ್ರಜ್ಞರೊಬ್ಬರು ಹೇಳಿಕೊಂಡಿದ್ದರು. ಆದರೆ, ಇದನ್ನು ಚಂದನ್ ಕುಮಾರ್ ಅಲ್ಲಗಳೆದಿದ್ದಾರೆ. ಇಂದು (ಆಗಸ್ಟ್ 1) ಸಂಜೆ ಸುದ್ದಿಗೋಷ್ಠಿ ಕರೆದು ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಸುದ್ದಿಗೋಷ್ಠಿಯಲ್ಲಿ ಅವರು ಧಾರಾವಾಹಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಶೂಟಿಂಗ್ ಸೆಟ್​ನಲ್ಲಿ ನಡೆದಿದ್ದೇನು ಎಂಬುದನ್ನು ಚಂದನ್ ಕುಮಾರ್ ವಿವರಿಸಿದ್ದಾರೆ. ‘ರಂಜಿತ್ ಎಂಬಾತ ನನ್ನ ಪದೇಪದೇ ಕರೆಯುತಿದ್ದ. ನನಗೆ 30 ನಿಮಿಷ ರೆಸ್ಟ್ ಬೇಕು ಎಂದಿದ್ದೆ. ಕೆಲ ಸಮಯ ಬಿಟ್ಟು ಆತ ‘5 ನಿಮಿಷ ಎಂದು 30 ನಿಮಿಷ ಮಲಗಿದ್ದಾನಲ್ಲೋ ಅವನು’ ಎಂದು ಕೂಗಿದ. ನಾನು ಕರೆದು ಏನಾಯ್ತು ಎಂದು ಕೇಳಿದೆ. ಡೈರೆಕ್ಟರ್ ಕರೀತಾ ಇದಾರೆ ಬರಲೇಬೇಕಂತೆ ಎಂದು ಆತ ಹೇಳಿದ. ನಾನು ಸುಮ್ಮನೆ ಹೋಗಪ್ಪ ಎಂದು ತಳ್ಳಿದೆ. ಆದರೆ, ಇದನ್ನು ಆತ ಅಲ್ಲಿ ಹೋಗಿ ಬೇರೆ ರೀತಿಯಲ್ಲಿ ಹೇಳಿದ್ದಾನೆ. ಕಣ್ಣೀರು ಹಾಕಿದ್ದಾನೆ’ ಎಂಬುದು ಚಂದನ್ ಕುಮಾರ್ ಅವರ ಮಾತು.

‘ಎಲ್ಲರೂ ಬಂದು ಗಲಾಟೆ ಮಾಡಿದರು. ಈಗ ಶೂಟಿಂಗ್ ನಡೆಯಲ್ಲ ಎಂದರೆ ನಾನು ಹೊರಡ್ತೀನಿ ಎಂದೆ. ಆಗ ಎಲ್ಲರೂ ಬಂದು ಅಡ್ಡಗಟ್ಟಿದರು. 3 ಗಂಟೆ ಎಲ್ಲಿಗೂ ಹೋಗೋಕೆ ಬಿಡಲಿಲ್ಲ. ಆಮೇಲೆ ನಿರ್ದೇಶಕ ಸಂಘದವರು ಅಂತ ಕೆಲವರು ಬಂದರು. ನನ್ನ ಪರವಾಗಿ ಯಾರೂ ಮಾತನಾಡಲಿಲ್ಲ. ಬೆಂಗಳೂರಿಂದ ಬಂದಿದ್ದೇನೆ ಎಂದು ಈ ರೀತಿ ಮಾಡಿದ್ದಾರೆ. ಹೊಡೆದು ಅವಮಾನ ಮಾಡಬೇಕು ಎಂದು ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ ಅವರು.

‘ತೆಲುಗು ಜನತೆ ಕೂಡ ಇದನ್ನು ಒಪ್ಪಲ್ಲ. ನನ್ನ ತಾಯಿ ಭಾಷೆ ಕನ್ನಡ. ತೆಲುಗು ದೊಡ್ಡಮ್ಮ, ತಮಿಳು ಚಿಕ್ಕಮ್ಮ ಅಂತ ಅಂದುಕೊಂಡವನು ನಾನು. ಎಲ್ಲರೂ ಅಮ್ಮಂದಿರೇ. ಅವರು ಮಾಡಿರೋದು ಅನ್ಯಾಯ. ಧಾರಾವಾಹಿ ನಿರ್ದೇಶಕರು ಈಗಲೂ ನನ್ನ ಜತೆ ಚೆನ್ನಾಗಿದ್ದಾರೆ. ನಾನು ಧಾರಾವಾಹಿಯಿಂದ ಹೊರಬರುತ್ತಿದ್ದೇನೆ’ ಎಂದಿದ್ದಾರೆ ಚಂದನ್.

TV9 Kannada


Leave a Reply

Your email address will not be published. Required fields are marked *