ಸ್ಯಾಂಡಲ್​​ವುಡ್​ ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹೊಂದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ, ಆದರೆ ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿ ಇದ್ದೀನಿ ಎಂದು ನಟ ದೊಡ್ಡಣ್ಣ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ ಹಾಕಿ ಯಾರೋ ಕಿಡಿಗೇಡಿಗಳು ರಿಪ್​ ಅಂತಾ ಹಾಕಿದ್ದಾರೆ. ದೊಡ್ಡಣ್ಣ ನಿಧನರಾಗಿದ್ದಾರೆ ಅನ್ನೋಥರದಲ್ಲಿ ಹಾಕಿದ್ದಾರೆ. ಇದರಿಂದ ನನಗೆ ನೂರಾರು ಕರೆಗಳು ಬರ್ತಿದೆ. ಹಲವು ಮಾಧ್ಯಮ ಮಿತ್ರರು, ಅಭಿಮಾನಿಗಳು ಕರೆ ಮಾಡುತ್ತಿದ್ದಾರೆ. ಆದ್ದರಿಂದ ನಾನು ಎಲ್ಲರಿಗೂ ಹೇಳುತ್ತಿದ್ದು, ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿ ಇದ್ದೀನಿ. ಅರಾಮವಾಗಿ ಇದ್ದೀನಿ, ಆದ್ದರಿಂದ ಯಾರು ಭಯ, ಆತಂಕ ಪಡುವ ಅಗತ್ಯವಿಲ್ಲ. ಕನ್ನಡ ನಾಡಿನ ಎಲ್ಲಾ ತಂದೆ-ತಾಯಿಗಳ ಆರ್ಶಿವಾದ ನನ್ನ ಮೇಲೆ ಇರುವವರೆಗೂ ನಿಮ್ಮ ದೊಡ್ಡಣ್ಣನಿಗೆ ಏನೂ ಆಗಲ್ಲ. ಇದರಿಂದ ಆಯುಷ್ಯ ಜಾಸ್ತಿ ಆಯ್ತು, ಒಂದು ಕಂಟಕ ಬಗೆಹರಿದಿದೆ ಅನ್ಕೋತಿನಿ. ನಾನು ಆರೋಗ್ಯವಾಗಿ ಇದ್ದೇನೆ ಎಂದು ಸ್ಪಷ್ಟಡಿಸಲು ಇಚ್ಛಿಸುತ್ತೇನೆ ಎಂದು ದೊಡ್ಡಣ್ಣ ತಿಳಿಸಿದ್ದಾರೆ.

The post ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿ ಇದ್ದೀನಿ- ನಟ ದೊಡ್ಡಣ್ಣ appeared first on News First Kannada.

Source: newsfirstlive.com

Source link