ನಾನು ಯಾವುದೇ ಪಕ್ಷದ ಏಜೆಂಟ್​ ಅಲ್ಲ, 40% ಬಗ್ಗೆ ಈಗಲೂ ಬದ್ಧ: ಸಿಎಂ ಬೊಮ್ಮಾಯಿ ಭೇಟಿ ಬಳಿಕ ಗುತ್ತಿಗೆದಾರ ಕೆಂಪಣ್ಣ ಮಾತು | Contractors association president kempanna meets CM Basavaraj Bommai in Bangalore


ನಾನು ಯಾವುದೇ ಪಕ್ಷದ ಏಜೆಂಟ್​ ಅಲ್ಲ, 40% ಬಗ್ಗೆ ಈಗಲೂ ಬದ್ಧ: ಸಿಎಂ ಬೊಮ್ಮಾಯಿ ಭೇಟಿ ಬಳಿಕ ಗುತ್ತಿಗೆದಾರ ಕೆಂಪಣ್ಣ ಮಾತು

ನಾನು ಯಾವುದೇ ಪಕ್ಷದ ಏಜೆಂಟ್​ ಅಲ್ಲ; 40% ಬಗ್ಗೆ ಈಗಲೂ ಬದ್ಧ: ಸಿಎಂ ಬೊಮ್ಮಾಯಿ ಭೇಟಿ ಬಳಿಕ ಕೆಂಪಣ್ಣ ಮಾತು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನದ ಮೇರೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Contractor kempanna) ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಇಂದು ಮಧ್ಯಾಹ್ನ ಭೇಟಿಯಾದರು. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ ಅವರು ನಾನು ಯಾವುದೇ ಪಕ್ಷದ ಏಜೆಂಟ್​ ಅಲ್ಲ. ಏಜೆಂಟ್ ಆಗಿದ್ದರೆ ನನ್ನ ಮೇಲೆ ಯಾವ ಕ್ರಮವನ್ನಾದರೂ ಕೈಗೊಳ್ಳಲಿ. ನನ್ನ ವಿರುದ್ಧ ಬೇಕಾದ್ರೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಿಬಿಡಿ. ನಾನು 40 % ಕಮೀಷನ್ ಬಗ್ಗೆ ಮಾತನಾಡಿದ್ದು ನಿಜ, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಪರ್ಸೆಂಟೇಜ್ ಇರಬಾರದೆಂಬ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಕಮಿಟಿ ಮಾಡಿ ನಿರ್ಧರಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ (CM Basavaraj Bommai) ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿ ಇವತ್ತಿನ ಭೇಟಿಗೂ 40 ಪರ್ಸೆಂಟ್ ಕಮಿಷನ್ ಹೋರಾಟಕ್ಕೂ ಸಂಬಂಧವಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಲು ನಮ್ಮ ಸಹಕಾರ ಬೇಕು ಅಂದಿದ್ದಾರೆ ಮುಖ್ಯಮಂತ್ರಿ. ನಮ್ಮ ಬೇಡಿಕೆಗಳಿಗೆ ಸಿಎಂ ಬೊಮ್ಮಾಯಿ ಚೆನ್ನಾಗಿ ಸ್ಪಂದಿಸಿದ್ದಾರೆ. ನಾವೂನೂ ಸಹಕಾರ ಕೊಡ್ತೀವಿ, ಅವರು ಕೂಡ ನಮಗೆ ಸಹಕಾರ ಕೊಡ್ತಾರೆ. ನಾವೂ ನಿರಂತರವಾಗಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತೀವಿ. ನಮ್ಮ ಬೇಡಿಕೆ ಈಡೇರದಿದ್ದರೆ ದಾಖಲೆಗಳನ್ನ ಹೊರಗಡೆ ಬಿಡುಗಡೆ ಮಾಡ್ತೀವಿ ಎಂದು ಕೆಂಪಣ್ಣ ಗುಡುಗಿದ್ದಾರೆ.

ಹೊಸದಾಗಿ ಕಮಿಟಿ ಮಾಡುವ ಭರವಸೆಯನ್ನ ಸಿಎಂ ಹೇಳಿದ್ದಾರೆ. ಪ್ಯಾಕೇಜ್ ಪದ್ಧತಿಯನ್ನ ಆದಷ್ಟು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಮಾಡೋದರ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದರು. ಸೀನಿಯಾರಿಟಿ ಪ್ರಕಾರ ಪೇಮೆಂಟ್ ಕೊಡಿಸೋದಾಗಿ ಹೇಳಿದ್ದಾರೆ. ಮೇ 11 ರಂದು ನಮ್ಮ ಗುತ್ತಿಗೆದಾರರ ಸಂಘದಿಂದ ಸಭೆ ಆಯೋಜಿಸಿದ್ದೇವೆ. ಬಳಿಕ ಹೋರಾಟದ ಸ್ವರೂಪದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ.

Kempanna: ಈಗ ಪಡಿತಿರೋ 40% ಕಮಿಷನ್‌ ಕಮ್ಮಿ ಮಾಡಿ ಅಂತಾ ಮನವಿ ಮಾಡಿದ್ದೇನೆ

TV9 Kannada


Leave a Reply

Your email address will not be published.