ಬಿಗ್‍ಬಾಸ್ ರಿಯಾಲಿಟಿ ಶೋಗೆ ಪ್ರತಿ ಸ್ಪರ್ಧಿಯು ಗೆಲ್ಲಬೇಕೆಂಬ ಕನಸುಹೊತ್ತು ಬಂದಿರುತ್ತಾರೆ. ಹಾಗೆಯೇ ಮಂಜು ಪಾವಗಡ ಕೂಡ ನಾನು ಈ ಬಾರಿ ಬಿಗ್‍ಬಾಸ್ ರಿಯಾಲಿಟಿ ಶೋ ಗೆಲ್ಲುವ ಚಾನ್ಸ್ ತುಂಬಾನೇ ಇತ್ತು ಎಂದು ಬಹಿರಂಗವಾಗಿ ಹೇಳಿದ್ದಾರೆ.

ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಪ್ರಥಮ ಬಾರಿಗೆ ಮಂಜು ಪಾವಗಡ ಫೇಸ್ ಬುಕ್ ಲೈವ್ ಬಂದಿದ್ದು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಮಂಜುಗೆ ಅಭಿಮಾನಿಯೊಬ್ಬರು ಮಂಜಣ್ಣ ನೀವು ಮೊದಲನೇ ದಿನದಿಂದಲೂ ತುಂಬಾ ಚೆನ್ನಾಗಿ ಟಾಸ್ಕ್ ಆಡುವ ಮೂಲಕ ನಮ್ಮ ಮನವನ್ನು ಗೆದ್ದಿದ್ದೀರಾ. ನೀವು ನನ್ನ ಫೇವರೆಂಟ್ ಕಂಟೆಸ್ಟೆಂಟ್. ನಿಮ್ಮನ್ನ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನೀವು ವಿನ್ ಆಗುವ ಚಾನ್ಸ್ ತುಂಬಾ ಇತ್ತು ಎಂದಿದ್ದಾರೆ.

ಇದಕ್ಕೆ ಮಂಜು ಕೂಡ ಹೌದು, ಖಂಡಿತವಾಗಿಯೂ ತುಂಬಾ ಚಾನ್ಸ್ ಇತ್ತು. ಹೊರಗಡೆ ಬಂದಿದ ತಕ್ಷಣ ಎಲ್ಲರೂ ಶೇ.100 ನೀವು ಗೆಲ್ಲುತ್ತಿದ್ರಿ. ನಿಮಗೂ ಹಾಗೂ ಅರವಿಂದ್‍ರವರಿಗೂ ತುಂಬಾ ಸ್ಪರ್ಧೆ ಇತ್ತು. ನೀವತ್ತು 100% ಗೆಲ್ಲುತ್ತಿದ್ರಿ ಎಂದಾಗ ನನಗೂ ಹೌದಪ್ಪ ಹಾಗಾದರೆ ನಾನು ಅಂದುಕೊಂಡಿದ್ದು ನಿಜ. ಜನ ನನ್ನನ್ನು ಇಷ್ಟು ಇಷ್ಟ ಪಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಆದ್ರೆ ನಿಜವಾಗಿಯೂ ನಾನು ವಿನ್ ಆಗುತ್ತಿದ್ದೆ ಎಂಬ ಕಾನ್ಫಿಡೆಂಟ್ ಇತ್ತು. ಆದ್ರೆ ಏನು ಮಾಡುವುದಕ್ಕೆ ಆಗುತ್ತದೆ ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕಾಗುತ್ತದೆ ಎಂದರು.

ನಾನು ಅಲ್ಲಿ ಗೆದ್ದಿದ್ದೇನೋ ಬಿಟ್ಟಿದ್ದೇನೋ ಗೊತ್ತಿಲ್ಲ. ಆದ್ರೆ ಇಷ್ಟು ಜನ ನನ್ನನ್ನು ಇಷ್ಟಪಟ್ಟರಲ್ಲ ಅಷ್ಟೇ. ನಾನು ಆಲ್ ಮೋಸ್ಟ್ ಗೆದ್ದಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

The post ನಾನು ವಿನ್ನರ್ ಆಗುವ ಚಾನ್ಸ್ ತುಂಬಾ ಇತ್ತು – ಮಂಜು appeared first on Public TV.

Source: publictv.in

Source link