‘ನಾನು ಶರ್ಟ್​ ಬಟನ್​ ಬಿಚ್ಚೋದು ಯಾಕೆ ಗೊತ್ತಾ?’ -ಸಿಕ್ರೇಟ್​ ರೀವಿಲ್​ ಮಾಡಿದ ಕ್ರೇಜಿಸ್ಟಾರ್​


ಮೆಗಾ ಜೂನಿಯರ್ ಕ್ರೇಜಿಸ್ಟಾರ್ ಮನುರಂಜನ್ ರವಿಚಂದ್ರನ್​ ನಟನೆಯ ಮೂರನೇ ಸಿನಿಮಾ ‘‘ಮುಗಿಲ್ ಪೇಟೆ’’ ರಿಲೀಸ್​ ಆಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನ ಮುಗಿಲ್​ ಪೇಟೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇನ್ನು ಪುತ್ರನ ಚಿತ್ರದ ಬಗ್ಗೆ ಮಾತನಾಡಿದ ರವಿಚಂದ್ರನ್​ ‘ಮುಗಿಲ್​ಪೇಟೆ’ಯಲ್ಲಿ ನನ್ನ ಮ್ಯೂಸಿಕ್​ ಬಳಸಿಕೊಂಡಿದ್ದಾರೆ ಪರವಾಗಿಲ್ಲ ನನ್ನ ಮಗ ಅಲ್ಲವಾ ಎಕ್ಸ್​​ಕ್ಯೂಸ್ ಕೊಡುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮಾತು ಮುಂದುವರೆಸಿದ ಅವರು ಮ್ಯೂಸಿಕ್​ ಜೊತೆ ನಾನು ಶರ್ಟ್​ ಬಿಚ್ಚಿವುದನ್ನು ಮನುರಂಜನ್​ ಮಾಡಿದ್ದಾರೆ ಎಂದರು. ಈ ವೇಳೆ ತಾವು ಯಾವಾಗಲು ಶರ್ಟ್ ಬಟನ್​​ ಬಿಚ್ಕೊಂಡಿರೋದ್ಯಾಕೆ ಎನ್ನುವ ಸಂಗತಿಯನ್ನು ಕೂಡ ಅವರು ಇಲ್ಲಿ ರಿವೀಲ್​​ ಮಾಡಿದ್ದಾರೆ.

ನಾನು ಯಾವಾಗಲೂ ಶರ್ಟ್​ ಬಟನ್​ ಬಿಚ್ಕೊಂಡಿರೋದಕ್ಕೆ ಕಾರಣ ನಾನು ಸೆಕ್ಸಿಯಾಗಿ ಕಾಣಲಿ ಅಂತಲ್ಲ. ಇದು ನನಗೆ ಅಂದಿನಿಂದ ರೂಢಿಯಾಗಿಬಿಟ್ಟಿದೆ, ಮುಂದೆ ಅದುವೇ ಅಭ್ಯಾಸವಾಗಿ ಬಿಟ್ಟಿತು. ಹೀಗಾಗಿ ನಾನು ಶರ್ಟ್​ ಬಟನ್​ ಬಿಚ್ಚಿರುತ್ತೇನೆ ಎಂದು ರವಿಚಂದ್ರನ್ ವಿವರಿಸಿದರು.

ಇನ್ನು ಮನುರಂಜನ್​ ಕಳೆದ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ಸಾಕಷ್ಟು ಇಂಪ್ರೂವ್​ ಆಗಿದ್ದಾನೆ. ಅವನ ನಟನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಅವನು ನನ್ನ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಾನೆ ಎಂದು ಕ್ರೇಜಿಸ್ಟಾರ್​ ಹೇಳಿದರು.

News First Live Kannada


Leave a Reply

Your email address will not be published. Required fields are marked *