ಹೈದರಾಬಾದ್: ಬಾಲಿವುಡ್ ನಟ ಸೋನು ಸೂದ್ ಅವರ ಹೆಸರನ್ನು ಮಟನ್ ಶಾಪ್‍ವೊಂದಕ್ಕೆ ಇಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ನಟ ಸೋನು ಸೂದ್ ಟ್ವೀಟ್ ಮೂಲಕ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಸಸ್ಯಾಹಾರಿ… ನನ್ನ ಹೆಸರಿನಲ್ಲಿ ಮಟನ್ ಅಂಗಡಿ..? ನಾನು ಅವರಿಗೆ ಯಾವುದಾದರೂ ಸಸ್ಯಾಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡಲು ಸಹಾಯ ಮಾಡಬಹುದೇ..? ಎಂದು ಸೋನು ಸೂದ್ ಸಖತ್ ತಮಾಷೆಯಾಗಿ ಪ್ರತಿಕ್ರಿಯಿಸಿ ಮಟನ್ ಅಂಗಡಿ ಓಪನ್ ಮಾಡಿವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಫೋಟೋ ಮೇಲೆ ಹಾಲು ಸುರಿಬೇಡಿ, ಹಸಿದವರಿಗೆ ನೀಡಿ- ಸೋನು ಸೂದ್

ಬಾಲಿವುಡ್ ನಟನ ಈ ಟ್ವೀಟ್‍ಗೆ 17 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ, 1,600 ನೆಟ್ಟಿಗರು ರೀಟ್ವೀಟ್ ಮಾಡಿದ್ದರೆ, ಸುಮಾರು ಒಂದು ಸಾವಿರ ಜನ ಸೋನು ಸೂದ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.  ನಟನ ಹಾಸ್ಯಮಯ ಟ್ವೀಟ್‍ಗೆ ಹಲವರು ಹಾಸ್ಯದ ಧಾಟಿಯಲ್ಲೇ ಪ್ರತಿಕ್ರಿಯೆ ನೀಡಿದ್ದರೆ. ಕೆಲವರು ಸೋನು ಸೂದ್‍ರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಕೆಲವರು ಔಷಧಿ ಮುಂತಾದ ಅಗತ್ಯ ಸೇವೆಗಳಿಗೆ ಮನವಿ ಮಾಡಿಯೂ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಆಹಾರ ವಿತರಿಸುತ್ತಿರುವ ಸೋನು ಸೂದ್

ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಸೋನು ಅವರ ಹೆಸರಿನಲ್ಲಿ ಮಟನ್ ಅಂಗಡಿಯೊಂದನ್ನು ತಡೆರೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊರೊನಾ ಸಂಕಷ್ಟದಲ್ಲಿ ಸಹಾಯವನ್ನು ಮಾಡುತ್ತಿರುವ ಸೋನು ಸೂದ್ ಅವರು ಕೊರೊನಾ ಸೋಂಕಿತರ ಪಾಲಿನ ದೇವರಾಗಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ, ನಟ ಕೋವಿಡ್ ರೋಗಿಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರ ಅಗತ್ಯ ಸಾಧನಗಳನ್ನೂ ವ್ಯವಸ್ಥೆ ಮಾಡುತ್ತಿದ್ದಾರೆ.

The post ನಾನು ಸಸ್ಯಾಹಾರಿ, ನನ್ನ ಹೆಸರಿನಲ್ಲಿ ಮಟನ್ ಅಂಗಡಿ: ಸೋನು ಸೂದ್ appeared first on Public TV.

Source: publictv.in

Source link