ನಾನು ಸಹ ದಲಿತನೇ, ದಲಿತರು ಸಿಎಂ ಆದ್ರೆ ತಕರಾರು ಇಲ್ಲ -ಸಿದ್ದರಾಮಯ್ಯ


ಮೈಸೂರು: ನಾನು ಸಹ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದ ಎಲ್ಲರೂ ದಲಿತರೇ.
ನಾನು ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಕೂಡ ದಲಿತನೇ. ದಲಿತರು ಸಿಎಂ ಆದ್ರೆ ನನ್ನದು ಏನು ತಕರಾರು ಇಲ್ಲ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹಿನಕಲ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ ಕಷ್ಟ. ನಾನು ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಸಿಪಿ, ಟಿಎಸ್‌ಪಿ ಅನುಧಾನ ಮೀಸಲಿಟ್ಟೆ. ನಾನು ಅಧಿಕಾರಕ್ಕೆ ಬರುವ ಮುನ್ನ ಯಾವ ಸರ್ಕಾರಗಳು ಜನಸಂಖ್ಯೆ ಅನುಗುಣವಾಗಿ ಹಣ ಮೀಸಲಿಟ್ಟಿರಲಿಲ್ಲ‌. ಫಾರ್ ದಿ ಫಸ್ಟ್ ಟೈಮ್ ಇನ್ ದಿ ಹಿಸ್ಟರಿ ಆಫ್ ಕರ್ನಾಟಕ, ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾನೂನು ರೂಪಿಸಿದೆ. ಇಂದಿಗೂ ದೇಶದಲ್ಲಿ ಈ ಕಾನೂನನ್ನ ತಂದಿಲ್ಲ‌. ಸಿಎಂ ಆದ ಒಂದು ಗಂಟೆಯೊಳಗೆ ಅಂಬೇಡ್ಕರ್, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮಗಳ ಸಾಲವನ್ನ ಬಡ್ಡಿ ಸಮೇತ ಮನ್ನಾ ಮಾಡಿದೆ.

ವೇದಿಕೆಯ ಮೇಲೆ ದಲಿತ ಸಿಎಂ ಕೂಗು..

ಕಾರ್ಯಕ್ರಮದ ವೇದಿಕೆ ಮೇಲೆಯೇ ದಲಿತ ಸಿಎಂ ಕೂಗು ಕೇಳಿ ಬಂದ ಹಿನ್ನೆಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ ಅವರು, ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂದು ನನ್ನ ಭಾಷಣವನ್ನ ತಿರುಚಿದ್ರು. ಆದರೆ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ಸಹ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದ ಎಲ್ಲರೂ ದಲಿತರೇ. ನಾನು ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಕೂಡ ದಲಿತನೇ ಎಂದರು.

ಅಲ್ಲದೇ ದಲಿತರು ಸಿಎಂ ಆದ್ರೆ ನನ್ನದು ಏನು ತಕರಾರು ಇಲ್ಲ. ಕಾಂಗ್ರೆಸ್ ನಲ್ಲಿ ಯಾರು ಸಿಎಂ ಆಗಬೇಕು ಅನ್ನೋದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕರು ಸೂಚಿಸಿದವರನ್ನ ಹೈಕಮಾಂಡ್ ಮುಖ್ಯಮಂತ್ರಿ ಅಂತಾ ಸೂಚಿಸುತ್ತಾರೆ. ಒಂದು ವೇಳೆ ದಲಿತರು ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಮೂರ್ನಾಲ್ಕು ರಾಜ್ಯಗಳಲ್ಲಿ ದಲಿತ ಸಿಎಂ ಮಾಡಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಮಾತ್ರ ದಲಿತ ಸಿಎಂ ಆಗಲು ಸಾಧ್ಯ.

ಮಾಜಿ ಸಚಿವ ಆಂಜನೇಯ ಹೆಚ್ಚು ಕೆಲಸ ಮಾಡಬೇಕಿತ್ತು, ಕೆಲಸ ಮಾಡಲಿಲ್ಲ..

ನಾನು ಸಹ ಅಂಬೇಡ್ಕರ್ ವಾದಿಯೇ. ಬಸವ, ಬುದ್ಧ, ಅಂಬೇಡ್ಕರ್ ತತ್ವಗಳನ್ನು ನಾನು ಪಾಲಿಸುತ್ತೇನೆ. ನಾನು ಅಧಿಕಾರಕ್ಕಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ನಲ್ಲಿ ಮಾತ್ರ ದಲಿತರು ಮುಖ್ಯಮಂತ್ರಿ ಆಗಲು ಸಾಧ್ಯ. ದೇಶದ ಐದಾರು ರಾಜ್ಯಗಳಲ್ಲಿ ಕಾಂಗ್ರೆಸ್ ನಿಂದ ದಲಿತರು ಮುಖ್ಯಮಂತ್ರಿ ಆಗಿದ್ದಾರೆ. ಬೇರೆ ಪಕ್ಷಗಳಲ್ಲಿ ದಲಿತರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ನಾನು ಅಧಿಕಾರದಲ್ಲಿದ್ದಾಗ ಸಂವಿಧಾನದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ನನ್ನ ಆತ್ಮಸಾಕ್ಷಿ ಬಹಳ ಕ್ಲೀಯರ್ ಇದೆ..

ಈ ವಿಚಾರದಲ್ಲಿ ಯಾರೇ ಚರ್ಚೆಗೆ ಬರಲಿ ನಾನು ಚರ್ಚೆಗೆ ಸಿದ್ಧ. ನನ್ನ ಸಂಪುಟದಲ್ಲಿ ಆಂಜನೇಯನನ್ನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿ ಮಾಡಿದ್ದೆ. ಆಂಜನೇಯ ಇನ್ನೂ ಹೆಚ್ಚು ಕೆಲಸ ಮಾಡಬೇಕಿತ್ತು ಕೆಲಸ ಮಾಡಲಿಲ್ಲ. ನಾನು ಬಸವಣ್ಣ, ಅಂಬೇಡ್ಕರ್ ಅವರ ಅನುಯಾಯಿ. ಅಧಿಕಾರಕ್ಕಾಗಿ ಸಿದ್ಧಾಂತ ಗಳ ವಿಚಾರದಲ್ಲಿ ರಾಜೀ ಮಾಡಿಕೊಳ್ಳಲ್ಲ. ಅಧಿಕಾರ ಇರುತ್ತೆ ಹೋಗುತ್ತೆ. ಸೋಲುತ್ತೇನೆ, ಗೆಲುತ್ತೇನೆ ಅದು ಬೇರೆ ಪ್ರಶ್ನೆ. ನನಗೆ ಬಸವಣ್ಣ, ಅಂಬೇಡ್ಕರ್ ತತ್ವ ಮುಖ್ಯ ಎಂದರು.

News First Live Kannada


Leave a Reply

Your email address will not be published. Required fields are marked *