ಬೆಂಗಳೂರು: ಕಾಂಗ್ರೆಸ್ನವ್ರು ಮಾಡ್ತಿರುವ ಪಾದಯಾತ್ರೆ ಕೊರೊನಾ ಹರಡುವ ಜಾನಪದ ಜಾತ್ರೆಯಾಗಿದ್ದು, ಇವರಿಗೆ ಜನರ ಬದುಕು ಬೇಕಿಲ್ಲ ಇವ್ರ ತೀಟೆ ತೀರಿಸಿಕೊಳ್ಳಬೇಕು ಅಷ್ಟೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ಮಹದಾಯಿ ಹೋರಾಟಗಾರ ರೈತರಿಗೆ ಬಾಸುಂಡೆ ಬರೋಹಾಗೆ ಬಾರಿಸೋ ಹಾಗೆ ಮಾಡಿದ್ರು. ಲಾಠಿ ಚಾರ್ಜ್ ಮಾಡಿಸಿದ್ರು. ಅದನ್ನು ಇಂದು ನಾನು ಸಿಎಂ ಆಗಿದ್ರೆ ಸಿದ್ದರಾಮಯ್ಯ ಹಾಗು ಅವರ ಕಾರ್ಯಕರ್ತರಿಗೆ ಅದನ್ನು ನೆನಪಿಸುತ್ತಿದ್ದೆ.. ಸರ್ಕಾರ ತುಂಬಾ ಔದಾರ್ಯ ತೋರಿದೆ ಎಂದು ಅವರು ಗುಡುಗಿದ್ದಾರೆ.
ಪಾದಯಾತ್ರೆ ಕುರಿತು ನ್ಯೂಸ್ಫಸ್ಟ್ನೊಂದಿಗೆ ಮಾತನಾಡಿದ ಅವರು ಈ ಪಾದಯಾತ್ರೆಯ ಉದ್ದೇಶವೇ ಬೇರೆಯಾಗಿದೆ. ಇವ್ರಿಗೆ ಜನರ ಜೀವನದ ಕುರಿತು ಕಾಳಜಿಯಿಲ್ಲ. ಇದರ ಉದ್ದೇಶವೇ ಬೇರೆ ಮತ್ತು ಪಾದಯಾತ್ರೆಯ ಹೆಸರೇ ಬೇರೆ. ಕೇವಲ ರಾಜಕೀಯ ಲಾಭಕ್ಕಾಗಿ ಇದನ್ನು ನಡೆಸಲಾಗುತ್ತಿದ್ದು ಕೋಟಿ ಕೋಟಿ ಹಣ ಖರ್ಚು ಮಾಡಿ ಕೋವಿಡ್ ಹರಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಲ್ಲಿ ಯಾರೂ ತಮ್ಮ ಸ್ವಯಂ ಪ್ರೇರಣೆಯಿಂದ ಬಂದವರಲ್ಲ ಅವ್ರನ್ನ ದೂರದ ಊರಿನಿಂದ ದುಡ್ಡು ಕೊಟ್ಟು ಕರೆದುಕೊಂಡು ಬಂದಿದ್ದಾರೆ. ಅವ್ರಿಗೆ ದಾರಿಯುದ್ದಕ್ಕೂ ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ. ಯಾವ ಹೋರಾಟಗಳಲ್ಲಿ ನಾವು ಈ ಪರಿಸ್ಥಿತಿಯನ್ನ ಕಾಣಲು ಸಾಧ್ಯ..? ಸಾಕಷ್ಟು ಜನರನ್ನ ಕರೆದುಕೊಂಡು ಬಂದು ಅವ್ರಿಗೆ ಕೋವಿಡ್ ಅಂಟಿಸಿ ವಾಪಸ್ ಕಳಿಸಲಾಗುತ್ತಿದೆ. ಆ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗೋದಕ್ಕೆ ಕಾಂಗ್ರೆಸ್ ಕೊಡುಗೆ ನೀಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಹಾದಾಯಿ ಹೋರಾಟಗಾರರಿಗೆ ಏನ್ ಮಾಡಿದ್ದರು ಎಂಬುದನ್ನ ನಾನು ನೆನಪಿಸಿಕೊಡ್ತೇನೆ. ಮಹದಾಯಿ ಹೋರಾಟದ ಸಂದರ್ಭದಲ್ಲಿ ಯಮನೂರಿನಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದರು. ಅವರ ಮೇಲೆ ಪೊಲೀಸರನ್ನು ಬಿಟ್ಟು ಹೊಡೆಸಿದ್ದರು. ಅಲ್ಲಿ ಇರದ ಕಾಳಜಿ ಇವತ್ತು ಇಲ್ಲ್ಯಾಕೆ ಬಂತು ಇದೊಂದು ಗಿಮಿಕ್ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.