ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಚೈನ್ ಲಿಂಕ್ ಕತ್ತರಿಸಲು ಲಾಕ್ ಡೌನ್ ಘೋಷಿಸಿದ್ದು, ಆದರೂ ಜನ ಅಡ್ಡಾಡುತ್ತಿದ್ದಾರೆ. ಅಂತೆಯೇ ಯುವಕನೊಬ್ಬನನ್ನು ತಡೆದಾಗ ಆತ ಪೊಲೀಸ್ ಕಮಿಷನರ್ ಗೆ ಅವಾಜ್ ಹಾಕಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಈ ಘಟನೆ ಹೆಬ್ಬಾಳದ ಸಿಬಿಐ ಬಳಿ ನಡೆದಿದ್ದು, ಇಲ್ಲಿ ಪೊಲಿಸರು ಯುವಕನನ್ನು ತಡೆದಿದ್ದಾರೆ. ಈ ವೇಳೆ ಆತ, ಇದು ಪೊಲೀಸರ ಕ್ರಮ ಸರಿ ಅಲ್ಲ, ನಾನು ಸಿಎಂ ಆಪ್ತ. ನಾನು ಫೈನ್ ಕಟ್ಟಲ್ಲ. ನಾನು ಮನೆಗೆ ಹೋಗ್ಬೇಕು ಬಿಡಿ. ನಾನು ಮನಸ್ಸು ಮಾಡಿದ್ರೆ ಏನಾಗುತ್ತೆ ಗೊತ್ತಾ ..? ಎಂದು ಪೊಲೀಸ್ ಕಮೀಷನರ್ ಕಮಲ್ ಪಂಥ್ ಮುಂದೆ ಹೈಡ್ರಾಮ ಮಾಡಿದ್ದಾನೆ.

ಯುವಕನ ಮಾತಿನಿಂದ ಸಿಟ್ಟಿಗೆದ್ದ ಕಮಿಷನರ್ ಮುಲಾಜಿಲ್ಲದೇ ಆತನ ವಾಹನ ಸೀಜ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಚೈನ್ ಲಿಂಕ್ ಕತ್ತರಿಸಲು ಲಾಕ್ ಡೌನ್ ಹೇರಿದ್ರೆ ಜನ ಸುಳ್ಳು ಕಥೆಗಳನ್ನು ಹೇಳಿ ರಸ್ತೆಗೆ ಇಳಿಯುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲಿಸರು ಹರಸಾಹಸ ಪಡುವಂತಾಗಿದೆ.

The post ನಾನು ಸಿಎಂ ಆಪ್ತ, ಫೈನ್ ಕಟ್ಟಲ್ಲ- ಕಮಿಷನರ್ ಮುಂದೆ ಯುವಕ ಹೈಡ್ರಾಮಾ appeared first on Public TV.

Source: publictv.in

Source link