‘ನಾನು ಸ್ಮೋಕ್​ ಮಾಡ್ತೀನಿ, ಅದ್ರಲ್ಲಿ ತಪ್ಪೇನಿದೆ?’ ‘ಬಿಗ್​ ಬಾಸ್​​’ನಲ್ಲಿ ಸೋನು ಗೌಡ ನೇರ ಪ್ರಶ್ನೆ | I Smoke And Drink it is not a problem says Bigg Bpss OTT Contestant Sonu Srinivas Gowda


‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸೋನು ಗೌಡ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಹಿಂಬಾಲಕರಿದ್ದಾರೆ.

ಟಿಕ್​ ಟಾಕ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ (Social Media) ಖ್ಯಾತಿ ಪಡೆದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ‘ಬಿಗ್​ ಬಾಸ್​ ಒಟಿಟಿ ಕನ್ನಡ ಸೀಸನ್​ 1’ಕ್ಕೆ ಎಂಟ್ರಿ ನೀಡಿದ್ದಾರೆ. ಅವರ ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಅವರ ಎಂಟ್ರಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅವರು ಮೊದಲ ವಾರವೇ ಹೊರ ಬೀಳಲಿದ್ದಾರೆ ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಈಗ ಅವರು ನೇರ ಮಾತಿನಿಂದ ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ.

‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸೋನು ಗೌಡ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಸಾಕಷ್ಟು ಹಿಂಬಾಲಕರಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮೂಲಕ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ. ಸೋನು ಅವರ ಕೆಲ ಖಾಸಗಿ ಫೋಟೋಗಳು ಈ ಮೊದಲು ಲೀಕ್ ಆಗಿದ್ದವು. ಆ ಫೋಟೋಗಳು ತಮ್ಮದಲ್ಲ ಎಂದೇ ಅವರು ಹೇಳಿದ್ದರು. ಈಗ ಅವರು ಮನೆಯಲ್ಲಿ ನೇರ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಸ್ಮೋಕ್ ಮಾಡುವ ವಿಚಾರ ಬಂತು. ನಟ ರೂಪೇಶ್​ ಅವರು ‘ನಾನು ಸ್ಮೋಕ್ ಮಾಡಲ್ಲ’ ಎಂದರು. ಇದಕ್ಕೆ ಸೋನು ಗೌಡ ಅವರು, ‘ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ’ ಎಂದರು. ‘ಸಿಗರೇಟ್ ಸೇದುತ್ತೀರಾ’ ಎಂದು ಆಶ್ಚರ್ಯ ರೀತಿಯಲ್ಲಿ ಕೇಳಿದರು ರೂಪೇಶ್. ‘ನಾನು ಸಿಗರೇಟ್ ಸೇದುತ್ತೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನೆ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *