‘ನಾನು ಸ್ವಲ್ಪ ಸೈಕೋ’ – ಹಿಂಗ್ಯಾಕಂದ್ರು ಕರ್ನಾಟಕ ಕ್ರಶ್ ರಶ್ಮಿಕಾ ಮಂದಾಣ್ಣ..?


ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅವರು ತಾವು ಸ್ವಲ್ಪ ಸೈಕೋ ಅಂತ ಹೇಳಿದ್ದಾರೆ. ಸದ್ಯ ‘ಪುಷ್ಪ’ ಚಿತ್ರದ ಸಕ್ಸಸ್​ ಖುಷಿಯಲ್ಲಿ ತೇಲಾಡುತ್ತಿರುವ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಪುಷ್ಪ ಚಿತ್ರ ಸೂಪರ್​ ಹಿಟ್​ ಆಗುತ್ತಿದಂತೆ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹೌದು ‘ಪುಷ್ಪ-2’ ಚಿತ್ರಕ್ಕಾಗಿ ನಿರ್ಮಾಪಕರಿಂದ ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನು ಸದಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಕರ್ನಾಟಕ ಕ್ರಶ್​ ತಮ್ಮ ಫಿಟ್ನೆಸ್​ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಮೊದಲಿನಂದಲೂ ಫಿಟ್ನೆಸ್​ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ರಶ್ಮಿಕಾ ಮಂದಣ್ಣ ಪ್ರತಿ ದಿನ ಜಿಮ್​ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ವರ್ಕೌಟ್​ ಮಾಡುತ್ತಾರೆ. ಆಗಾಗ ಸೋಶಿಯಲ್​ ಮೀಡಿಯಾದಲ್ಲೂ ತಮ್ಮ ವರ್ಕೌಟ್​ ವಿಡಿಯೋಗಳನ್ನು ರಶ್ಮಿಕಾ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೇ ಈ ಬಾರಿಯ ವೀಕೆಂಡ್ ಅನ್ನು ಕೂಡ ರಶ್ಮಿಕಾ ಜಿಮ್​ನಲ್ಲಿ ಕಳೆದಿದ್ದಾರೆ.

News First Live Kannada


Leave a Reply

Your email address will not be published. Required fields are marked *