ನಾನು ಹಿಂದೂ, ಹಾಗಾಗಿ ದೇವಸ್ಥಾನಗಳಿಗೆ  ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್ | I am going to a temple because I am a Hindu says Arvind Kejriwal


ನಾನು ಹಿಂದೂ, ಹಾಗಾಗಿ ದೇವಸ್ಥಾನಗಳಿಗೆ  ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್

ಪಣಜಿ: ನಾನು ಹಿಂದೂ ಎಂಬ ಕಾರಣಕ್ಕೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಆಮ್ ಆದ್ಮಿ ಪಕ್ಷದ (Aam Aadmi Party) ರಾಷ್ಟ್ರೀಯ ಸಂಚಾಲಕರಾದ ಕೇಜ್ರಿವಾಲ್ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ “ಮೃದು ಹಿಂದುತ್ವ” ದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ. “ನೀವು ದೇವಸ್ಥಾನಕ್ಕೆ ಹೋಗುತ್ತೀರಾ? ನಾನು ಕೂಡ ದೇವಸ್ಥಾನಕ್ಕೆ ಹೋಗುತ್ತೇನೆ. ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ, ನೀವು ಅದನ್ನು ಭೇಟಿ ಮಾಡಿದಾಗ ನಿಮಗೆ ಶಾಂತಿ ಸಿಗುತ್ತದೆ. ಅವರ (ಮೃದು ಹಿಂದುತ್ವದ ಆರೋಪ ಮಾಡುವವರು) ಆಕ್ಷೇಪಣೆ ಏನು? ಏಕೆ ವಿರೋಧ ವ್ಯಕ್ತಪಡಿಸಬೇಕು? ನಾನು ಹಿಂದೂ ಎಂಬ ಕಾರಣಕ್ಕೆ ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ, ನನ್ನ ಪತ್ನಿ ಗೌರಿಶಂಕರ ದೇವಸ್ಥಾನಕ್ಕೆ ಭೇಟಿ ನೀಡುತ್ತಾಳೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತೀರ್ಥಯಾತ್ರೆಗಳನ್ನು ಪ್ರಾಯೋಜಿಸುವಂತಹ ಕರಾವಳಿ ರಾಜ್ಯದ ಯೋಜನೆಗಳನ್ನು ಎಎಪಿ ನಕಲು ಮಾಡುತ್ತಿದೆ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಸಾವಂತ್ ಅವರು ನಿಜವಾಗಿಯೂ ತಮ್ಮ ಪಕ್ಷವನ್ನು ನಕಲಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
|
“ಪ್ರಮೋದ್ ಸಾವಂತ್ ನಮ್ಮನ್ನು ನಕಲು ಮಾಡುತ್ತಿದ್ದಾರೆ ಎಂದು ನಾನು ಹೇಳಬಯಸುತ್ತೇನೆ, ನಾವು ವಿದ್ಯುತ್ ಉಚಿತ ನೀಡುತ್ತೇವೆ ಎಂದು ನಾನು ಹೇಳಿದಾಗ ಅವರು ನೀರು ಉಚಿತವಾಗಿ ನೀಡಿದರು, ನಾವು ಉದ್ಯೋಗ ಭತ್ಯೆ ನೀಡುತ್ತೇವೆ ಎಂದು ಹೇಳಿದಾಗ ಅವರು ಸುಮಾರು 10,000 ಉದ್ಯೋಗಗಳನ್ನು ಘೋಷಿಸಿದರು. ನಾನು ತೀರ್ಥಯಾತ್ರೆಗಳ ಬಗ್ಗೆ ಮಾತನಾಡುವಾಗ ಅವರು ತಮ್ಮ ಯೋಜನೆ ಘೋಷಣೆ ಮಾಡಿದರು ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿ ಮುಖ್ಯಮಂತ್ರಿಗಳು ತಮ್ಮ ಭೇಟಿಯ ಸಮಯದಲ್ಲಿ, ಭಂಡಾರಿ ಸಮುದಾಯದ ಸದಸ್ಯರನ್ನು ಭೇಟಿ ಮಾಡಿದರು.ಅದೇ ವೇಳೆ ಕಾರ್ಮಿಕ ಸಂಘಟನೆಯ ಮತ್ತು ಗಣಿ ಉದ್ಯಮಿ ನಾಯಕ ಪುತಿ ಗಾಂವ್ಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು.

ಇದನ್ನೂ ಓದಿ: ಕೊವಿಡ್ ಲಸಿಕೆ ವಿತರಣೆ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ದತಿ ನಿರ್ಧಾರವನ್ನು ಶ್ಲಾಘಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

TV9 Kannada


Leave a Reply

Your email address will not be published. Required fields are marked *