ಬೆಂಗಳೂರು: ನಾನು ತಗೊಂಡಿರೋ ಗಾಡಿಯನ್ನೇ ಪುನೀತ್ ರಾಜ್​ಕುಮಾರ್ ತಗೊಂಡಿದ್ದಾರೆ. ರಾಜ್​​ಕುಮಾರ್ ಮಗ ತಗೊಂಡಿರೋದು ಅದನ್ನೇ.. ತೂಗುದೀಪ ಶ್ರೀನಿವಾಸ್ ಅವರ ಮಗ ತಗೊಂಡಿರೋದು ಅದನ್ನೇ.. ಕನ್ನಡ ಇಂಡಸ್ಟ್ರಿನಲ್ಲಿ ಇದನ್ನ ಬೇರೆ ಯಾವನಾದ್ರೂ ತಗಂಡವ್ನಾ ಕೇಳ್ಕೊಳಿ.. ಎಲ್ಲಾರೂ ನಮ್ಮಪ್ಪ ಹಂಗೆ ಹೇಳ್ಕೊಟ್ಟ ಹಿಂಗೆ ಹೇಳ್ಕೊಟ್ಟ ಅಂತಾರೆ.. ನಮ್ಮಪ್ಪ ಏನೂ ಹೇಳ್ಕೊಟ್ಟಿಲ್ಲ ನಂಗೆ.. ಹೇಳ್ಕೊಡೋಕೂ ಮುಂಚೆ ಹೊರಟು ಹೋದ್ರು. ಇಲ್ಲ ಅಂದಿದ್ರೆ ಇಂಥವ್ರನ್ನ ತುಂಬಾ ಜನರನ್ನ ಆಟ ಆಡಿಸ್ತಾ ಇದ್ದೆ.

ಇವತ್ತು ಇಂದ್ರಜಿತ್ ಗಂಡಸಾಗಿದ್ರೆ ನನ್ನ ವಾಯ್ಸ್ ತೆಗೆಯೋಕೆ ಹೇಳಿ. ಅದಾದ್ಮೇಲೆ ಅವರು ಏನೇ ಮಾಡಿಕೊಂಡ್ರೂ ಐ ಆ್ಯಮ್ ರೆಡಿ ಟು ಫೇಸ್ ಇಟ್. ಅವರಿಗೆ ಹೊಡೆದ್ರು ಇವರಿಗೆ ಹೊಡೆದ್ರು.. ಮರ್ಡರ್ ಮಾಡಿದ್ದೀನಾ..? ಪೊಲೀಸವರಿಗೆ ಇಷ್ಟೆಲ್ಲಾ ಪ್ರೆಸರ್ ಕೊಡ್ತಿದ್ದಾರಲ್ಲಾ.. ಮರ್ಡರ್ ಮಾಡಿದ್ರೆ ಏನೆಲ್ಲಾ ಆಗಿರೋದು.. ನಾನು ಸ್ವಲ್ಪ ಸಮಾಜ ಜ್ಞಾನ ಇಟ್ಟುಕೊಂಡಿರುವವನು. ನಾನು ಅನ್​ಎಜುಕೇಟೆಡ್ಡೇ.. 101 ಪರ್ಸೆಂಟ್.. ಎಸ್​ಎಸ್​ಎಲ್​ಸಿ ಪಾಸ್..ಆದ್ರೂ ಕುರುಕ್ಷೇತ್ರಾನೂ ಮಾಡ್ತೀನಿ.. ಸಂಗೊಳ್ಳಿ ರಾಯಣ್ಣನೂ ಮಾಡ್ತೀನಿ.. ಮೆಜೆಸ್ಟಿಕ್ಕೂ ಮಾಡ್ತೀನಿ. ಅವ್ನಿಗೆ ಯೋಗ್ಯತೆ ಇದ್ರೆ ಕರೆಕ್ಟಾಗಿ ಒಂದು ಸಿನಿಮಾ ಮಾಡೋಕೆ ಹೇಳಿ. ಸಿನಿಮಾದಲ್ಲಿ ನಂಗೆ ಎಜುಕೇಷನ್ ಸಾಕು ಅಂದುಕೊಳ್ತೀನಿ. ಪತ್ರಿಕೋದ್ಯಮದ ಎಜಕೇಷನ್ ಅವರು ಮಾಡ್ಕೊಳ್ಳಿ. ಇದನ್ನೇ ಉಮಾಪತಿಗೂ ಕೇಳಿ ಎಂದು ಪ್ರಶ್ನಿಸಿದರು.

The post ನಾನು 10th ಪಾಸ್.. ಆದ್ರೂ ಕುರುಕ್ಷೇತ್ರಾನೂ ಮಾಡ್ತೀನಿ.. ಸಂಗೊಳ್ಳಿ ರಾಯಣ್ಣನೂ ಮಾಡ್ತೀನಿ appeared first on News First Kannada.

Source: newsfirstlive.com

Source link