ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಏಳುತ್ತಲೇ ಶುಭಾ ಪೂಂಜಾ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ವಿವಾಹವಾಗಿ ತಾವು ಪ್ರಗ್ನೆಂಟ್ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ಮನೆ ಮಂದಿ ಫುಲ್ ನಕ್ಕಿದ್ದಾರೆ.

ಹೌದು ತಮಗೆ ಬಿದ್ದ ಕನಸಿನ ಕುರಿತು ಶುಭಾ ಹೇಳಿದ್ದು, ಬೆಳಗ್ಗೆ ಏಳುತ್ತಲೇ ನಾನು ನಾಲ್ಕು ತಿಂಗಳು ಪ್ರಗ್ನೆಂಟ್ ಆಗಿದ್ದೆ ಎನ್ನುವ ಮೂಲಕ ಸ್ಪರ್ಧಿಗಳನ್ನು ಅಚ್ಚರಿಪಡಿಸಿದ್ದಾರೆ. ಬಳಿಕ ಇದು ಆಗಿದ್ದು, ಕನಸಲ್ಲಿ ಎಂದು ಹೇಳಿದ್ದಾರೆ.

ನಿನ್ನೆ ಮಂಜಾ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ತಕ್ಷಣ ಮದುವೆ ಮಾಡಿಕೊಳ್ಳುತ್ತೀಯಾ ಏನ್ ಕಥೆ ಎಂದು ಕೇಳುತ್ತಿದ್ದ. ನಾನು ಹೂ ಹೋದ್ ತಕ್ಷಣ ಆಗ್ತೀನಿ ಕಣೋ ಅಂತಿದ್ದೆ. ಹೌದು ಸಿಂಪಲ್ ಆಗಿಯಾದರೂ ಆಗು ಎಂದು ಹೇಳುತ್ತಿದ್ದ. ಹೀಗೆ ನನ್ನ ಮದುವೆ ಬಗ್ಗೆ ನಿನ್ನೆ ಮಾತನಾಡುತ್ತಿದ್ದೆವು. ಅದೇ ನನ್ನ ಮೈಂಡ್‍ನಲ್ಲಿ ಪ್ಲೇ ಆಗಿದೆ ಅನ್ಸುತ್ತೆ, ಅಚ್ಚರಿಯ ಕನಸು ಬಿದ್ದಿತ್ತು ಎಂದು ಹೇಳಿದ್ದಾರೆ.

ಕನಸಲ್ಲಿ ನನಗೆ ಮದುವೆ ಆಗಿ, ನಾಲ್ಕು ತಿಂಗಳು ಗರ್ಭಿಣಿ ಸಹ ಆಗಿದ್ದೇನೆ. 4-5 ತಿಂಗಳು ಪ್ರಗ್ನೆಂಟ್ ಮನೆ ತುಂಬಾ ಗೋಳಾಡುತ್ತಿದ್ದೇನೆ. ಇನ್ನೂ ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಮಡಚುತ್ತಿದ್ದೆ. ಬಳಿಕ ಓ ಹೆಂಗಪ್ಪ ಈಗ ಬಿಗ್ ಬಾಸ್‍ಗೆ ಹೋಗೋದು ಎಂದು ನಾನೇ ಅಂದುಕೊಳ್ಳುತ್ತಿದ್ದೆ ಎಂದಿದ್ದಾರೆ. ಇದನ್ನು ಕೇಳಿದ ಪ್ರಂಶಾಂತ್ ಸಂಬರಗಿ ಹಾಗೂ ಮನೆ ಮಂದಿ ಫುಲ್ ನಕ್ಕಿದ್ದು, ತಮಾಷೆ ಮಾಡಿದ್ದಾರೆ.

ಇದಕ್ಕೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿ, ಪ್ರಗ್ನೆಂಟ್ ಆಗ್ಬಿಟ್ಟೆ ಎಂದು ನಕ್ಕಿದ್ದಾರೆ. ಅಲ್ಲದೆ ಮೊದ್ಲೇ ಟಾಸ್ಕ್ ಮಾಡಲ್ಲ, ಇನ್ನು ಹೊಟ್ಟೆ ಇಟ್ಟುಕೊಂಡು ಹೇಗೆ ಟಾಸ್ಕ್ ಮಾಡೋದು ಎಂದು ಕೇಳಿ ನಕ್ಕಿದ್ದಾರೆ. ಬಳಿಕ ಶುಭಾ ಏನೆಲ್ಲಾ ಡ್ರೀಮ್ ಗೊತ್ತಾ ಎಂದು ಹೇಳಿ ಮಂದಹಾಸ ಬೀರಿದ್ದಾರೆ.

The post ನಾನು 4 ತಿಂಗಳ ಗರ್ಭಿಣಿ – ಸ್ಪರ್ಧಿಗಳನ್ನು ಅಚ್ಚರಿಗೊಳಿಸಿದ ಶುಭಾ appeared first on Public TV.

Source: publictv.in

Source link