ಬೆಂಗಳೂರು: ‘ನಾನು ಕೂಡ ಮುಂದಿನ ಸಿಎಂ ಹುದ್ದೆಯ ಆಕಾಂಕ್ಷಿ ಅನ್ನೋದು ನಿಶ್ಚಿತ’ ಅಂತಾ ಮಾಜಿ ಸಚಿವ ಎಂ‌.ಬಿ.ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್​ನಲ್ಲಿ ಎದ್ದಿರುವ ಮುಂದಿನ ಸಿಎಂ ವಿವಾದದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್.. ಸಿಎಂ ಆಗಬೇಕೆನ್ನುವುದು ನಿಶ್ಚಿತ, ಆದ್ರೆ ದುರಾಸೆಯಾಗಬಾರದು. ಮೊದಲು ಪಕ್ಷವನ್ನ ಅಧಿಕಾರಕ್ಕೆ ತರಬೇಕು. ನಂತರ ಪಕ್ಷ ಯಾರು ಸಿಎಂ ಆಗಬೇಕು ಅನ್ನೋದನ್ನ ನಿರ್ಧರಿಸುತ್ತೆ. ಎಲ್ಲರಿಗೂ ಸಿಎಂ ಆಗುವ ಆಸೆ ಇರುತ್ತೆ ಎಂದರು.

ಇನ್ನು ಶಾಸಕಾಂಗ ಸಭೆಯಲ್ಲೂ ಹೈಕಮಾಂಡ್ ತೀರ್ಮಾನಕ್ಕೆ ಬಿಡ್ತಾರೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕೆಲವೊಮ್ಮೆ ಹೈಕಮಾಂಡ್ ತೀರ್ಮಾನಕ್ಕೆ ಬಿಡೋದು ನಿಜ. ಆದರೆ ಎಷ್ಟೋ ಸಲ ಹೈಕಮಾಂಡೇ ಹೇಳುತ್ತೆ.. ಶಾಸಕರ ಅಭಿಪ್ರಾಯ ಪಡೆಯಿರಿ ಅಂತಾ ಹೇಳೋ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಬಿಎಸ್‌ವೈ ಬಳಿಕ ವೀರಶೈವ ಲಿಂಗಾಯತರಲ್ಲಿ ಪರ್ಯಾಯ ನಾಯಕರಿಲ್ಲ ಎಂಬ ಚರ್ಚೆ ವಿಚಾರಕ್ಕೆ ಮಾತನಾಡಿ.. ಯಡಿಯೂರಪ್ಪ ಒಬ್ಬ ದೊಡ್ಡ ನಾಯಕ, ಅದರಲ್ಲಿ ಎರಡು ಮಾತಿಲ್ಲ. ಲಿಂಗಾಯತ ಸಮುದಾಯದಲ್ಲಿ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಅವರ ನಂತರ ಎರಡನೇ ಹಂತದ ನಾಯಕರ ನಾಯಕರೂ ಬೆಳೆದಿದ್ದಾರೆ. ಕಾಂಗ್ರೆಸ್‌ನಲ್ಲಿ ನಾನು, ಖಂಡ್ರೆ, ಶರಣ್ ಪ್ರಕಾಶ್ ಪಾಟೀಲ್ ಇದ್ದೇವೆ. ಬಿಜೆಪಿಯಲ್ಲಿ ಬೊಮ್ಮಾಯಿ, ಶೆಟ್ಟರ್, ಯತ್ನಾಳ್ ಸೋಮಣ್ಣ, ಖತ್ತಿ, ಬೆಲ್ಲದ್ ಇದ್ದಾರೆ. ಯಡಿಯೂರಪ್ಪ ನಂತರವೂ ಲಿಂಗಾಯತ ಸಮುದಾಯ ದೊಡ್ಡದಿದೆ‌ ಎಂದರು.

The post ನಾನೂ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ -ಉರಿಯುವ ಬೆಂಕಿಗೆ ತುಪ್ಪ ಸುರಿದ್ರಾ ಎಂ.ಬಿ. ಪಾಟೀಲ್ appeared first on News First Kannada.

Source: newsfirstlive.com

Source link