ನಾನೂ ದಲಿತ; ಅವಕಾಶ ವಂಚಿತರೆಲ್ಲರೂ ದಲಿತರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ | Siddaramaiah and GT Devegowda on Dalit CM BR Ambedkar at Mysuru


ನಾನೂ ದಲಿತ; ಅವಕಾಶ ವಂಚಿತರೆಲ್ಲರೂ ದಲಿತರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಸಿದ್ದರಾಮಯ್ಯ

ಬೆಂಗಳೂರು: ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರುವ ಎಲ್ಲರೂ ದಲಿತರು. ಹೀಗಾಗಿ ನಾನೂ ದಲಿತ. 3 ಪಕ್ಷಗಳು ದಲಿತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಮಾಜಿ ಮೇಯರ್​ ಪುರುಷೋತ್ತಮ್​ ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ಪದ್ಧತಿಯಿದೆ. ಹೈಕಮಾಂಡ್, ಶಾಸಕರು ಹೇಳಿದವರು ಸಿಎಂ ಆಗುತ್ತಾರೆ ಎಂದು ಮೈಸೂರಿನ ಹಿನಕಲ್​ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ನವೆಂಬರ್ 9) ಹೇಳಿಕೆ ನೀಡಿದ್ದಾರೆ. ಮೈಸೂರಿನ ಹಿನಕಲ್‌ನಲ್ಲಿ ಡಾ.ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

ಸಮುದಾಯದ ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಿಂದಗಿಯ ದಲಿತ ಎಡಗೈ ಸಮುದಾಯದ ಸಭೆಯಲ್ಲಿ ಹೇಳಿದ್ದೆ. ಆರ್​ಎಸ್​ಎಸ್​ ಗಿರಾಕಿಗಳು ಈ ಭಾಷಣ ತಿರುಚಿ ಗದ್ದಲ‌ ಎಬ್ಬಿಸಿದರು. ದಲಿತರು ಅಂದ್ರೆ ಬರೀ ಪರಿಶಿಷ್ಟ ಜಾತಿಯವರು ಮಾತ್ರವಲ್ಲ. ನಾನು ಕೂಡ ದಲಿತನೇ, ಅವಕಾಶ ವಂಚಿತರೆಲ್ಲರೂ ದಲಿತರು. ಯಾರೇ ಮುಖ್ಯಮಂತ್ರಿ ಆದ್ರೂ ನಾನು ಖುಷಿ ಪಡುತ್ತೇನೆ. ಹೈಕಮಾಂಡ್ ದಲಿತರು ಸಿಎಂ ಆಗಲಿ ಅಂದ್ರೆ ಹೆಚ್ಚು ಸಂತಸ. ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾನೇನೂ ಅಪ್ಪನ ಮನೆ ದುಡ್ಡಿನಿಂದ ಅನ್ನಭಾಗ್ಯ ಕೊಟ್ಟಿಲ್ಲ. ಜನರ ತೆರಿಗೆ ಹಣದಲ್ಲಿಯೇ ಜನರಿಗೆ ಅಕ್ಕಿ ಕೊಟ್ಟಿದ್ದೇನೆ. ತೆರಿಗೆ ಹಣದಲ್ಲಿ ಬಡವರ ಸಹಾಯಕ್ಕೂ ಬದ್ಧತೆ ಬೇಕು. ಚುನಾವಣೆಯಲ್ಲಿ ನಾವು ದುರದೃಷ್ಟವಶಾತ್ ಸೋತೆವು. ಬಡ್ತಿ ಮೀಸಲು ವಿಚಾರದಲ್ಲಿ ಕೆಲವರು ಬಂದು ಹೇಳಿದ್ರು. ನಿಮಗೆ ಕೆಲ ಸಮಾಜದ ಮತ ಬರಲ್ಲ ಅಂತಾ ಹೇಳಿದ್ದರು. ನಾನು ಇದ್ಯಾವುದಕ್ಕೂ ಕೇರ್ ಮಾಡಿರಲಿಲ್ಲ. ನನಗೆ ಸಂವಿಧಾನದ ಆಶಯ ಜಾರಿ ಮುಖ್ಯವಾಗಿತ್ತು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಂಬೇಡ್ಕರ್‌ರವರು ಅತ್ಯುತ್ತಮ ಸಂವಿಧಾನ ನೀಡಿದ್ದಾರೆ. ನಮ್ಮ ಸಂವಿಧಾನದ ಎಲ್ಲರೂ ಬಗ್ಗೆ ತಿಳಿದುಕೊಳ್ಳಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ಇದು ಡಾ.ಬಿ.ಆರ್. ಅಂಬೇಡ್ಕರ್‌ರವರ ಧ್ಯೇಯವಾಗಿತ್ತು. ಮತದಾರರು ಜಾಗೃತರಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್‌ ಆಶಯದಂತೆ ಬದುಕಬೇಕು ಎಂದು ಮೈಸೂರಿನ ಹಿನಕಲ್‌ನಲ್ಲಿ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಎದುರು ದಲಿತ ಸಿಎಂ ಕೂಗು ಕೇಳಿಬಂದಿದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ‌ ನೀಡುತ್ತೇವೆಂದು ಸ್ಪಷ್ಟಪಡಿಸಲಿ ಎಂದು 3 ಪಕ್ಷಗಳಿಗೆ ಮಾಜಿ ಮೇಯರ್ ಪುರುಷೋತ್ತಮ್ ಸವಾಲು ಹಾಕಿದ್ದಾರೆ. ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗ್ತಿದೆ. ಆದರೆ ಅಧಿಕಾರ ನೀಡುವಾಗ ಮಾತ್ರ ಕಡೆಗಣಿಸಲಾಗುತ್ತಿದೆ. ಈವರೆಗೂ ದಲಿತರೊಬ್ಬರು ರಾಜ್ಯದ ಸಿಎಂ ಆಗಲು ಸಾಧ್ಯವಾಗಿಲ್ಲ ಎಂದು ಅಂಬೇಡ್ಕರ್ ಭವನ ಉದ್ಘಾಟನೆ ವೇಳೆ ಪುರುಷೋತ್ತಮ್ ಹೇಳಿದ್ದಾರೆ.

ಇದನ್ನೂ ಓದಿ: ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿಂಗ್

ಇದನ್ನೂ ಓದಿ: ನಾನು ಯಾವ ಪಕ್ಷದಲ್ಲಿರಬೇಕೆಂದು ಜನ ತೀರ್ಮಾನ ಮಾಡುತ್ತಾರೆ: ಜಿಟಿ ದೇವೇಗೌಡ ಹೇಳಿಕೆ

TV9 Kannada


Leave a Reply

Your email address will not be published. Required fields are marked *