ನಾನೆಲ್ಲೇ ಇದ್ದರೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ವಾಲ್ಮೀಕಿ ಶ್ರೀಗಳಿಗೆ ಬೆಂಬಲ ಇದ್ದೇ ಇರುತ್ತದೆ: ಕಿಚ್ಚ ಸುದೀಪ್ | I have been supporting seer who is fighting for 7.5 percent reservation for Valmiki community: Kiccha Sudeep ARB


Raichur:  ಕಿಚ್ಚ ಸುದೀಪ್ (Kiccha Sudeep) ಅವರ ಬಹು-ನಿರೀಕ್ಷಿತ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ (Vikrant Rona) ಜುಲೈನಲ್ಲಿ ಬಿಡುಗಡೆ ಆಗಲಿದೆ ಅಂತ ಹೇಳಲಾಗುತ್ತಿದೆ. ಬಹಳ ದಿನಗಳಿಂದ ಅವರ ಚಿತ್ರ ತೆರೆಕಂಡಿಲ್ಲ. ಹಾಗಾಗಿ ಅವರ ಅಭಿಮಾನಿಗಳು ಬಹಳ ಕಾತುರತೆಯಿಂದ ‘ವಿಕ್ರಾಂತ್ ರೋಣ’ ಗಾಗಿ ಕಾಯುತ್ತಿದ್ದಾರೆ. ಅಂದಹಾಗೆ, ಸುದೀಪ್ ಬುಧವಾರದಂದು ರಾಯಚೂರಿನಲ್ಲಿದ್ದರು. ಜಿಲ್ಲೆಯ ಸಿರವಾರ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ವಾಲ್ಮೀಕಿ ಮಹರ್ಷಿಯ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಬರುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ ಕುರುಕುಂದ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಸುದೀಪ್ ಅವರು ವಾಲ್ಮೀಕಿ ಜನಾಂಗಕ್ಕೆ ಶೇಕಡಾ 7.5 ಮೀಸಲಾತಿಗಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ (Sri Prasannanda Mahaswamiji) ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಯಾಕೆ ಬಹಿರಂಗವಾಗಿ ಬೆಂಬಲ ನೀಡುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಕಿಚ್ಚ ಸಮಂಜಸ ಉತ್ತರ ನೀಡಲಿಲ್ಲ.

ನಾನು ಸ್ವಾಮೀಜಿಗಳ ಸಂಪರ್ಕದಲ್ಲಿಲ್ಲ ಅಂತ ಅವರ ಬಾಯಿಂದ ಹೇಳಿಸಿಬಿಡಿ ವಿಷಯದ ಬಗ್ಗೆ ಮುಂದೆ ಮಾತಾಡೋಣ ಎಂದು ಹೇಳುವ ನಟ ಪ್ರಶ್ನೆ ಕೇಳಿದ ಪತ್ರಕರ್ತನಿಗೆ, ಇದು ನೀವೇ ಸೃಷ್ಟಿ ಮಾಡಿಕೊಂಡಿರುವ ಪ್ರಶ್ನೆಯಾಗಿದೆ, ಬೇರೆ ಯಾರನ್ನೂ ಇದನ್ನು ಕೇಳಿರಲ್ಲ ಅನ್ನುತ್ತಾರೆ. ನಾನು ಅವರ ಸಂಪರ್ಕದಲ್ಲಿದ್ದೇನೆ ಮತ್ತು ಪ್ರತಿಭಟನೆಗೆ ಬೆಂಬಲವನ್ನೂ ನೀಡುತ್ತಿದ್ದೇನೆ ಅಂತ ಹೇಳಿದರು.

ಹಲವಾರು ದೇವ ದೇವತೆಗಳಿಗೆ ನಾವು ಮನೆಯಿಂದಲೇ ಕೈಮುಗಿಯುತ್ತೇವೆ, ಯಾಕೆಂದರೆ ಪ್ರತಿಸಲ ಆ ದೇವಸ್ಥಾನಗಳಿರುವ ಸ್ಥಳಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಾವೇ ಎಲ್ಲೇ ಇದ್ದರೂ ನಮ್ಮ ತಂದೆತಾಯಿಗಳ ಆಶೀರ್ವಾದ ನಮ್ಮ ಮೇಲೆ ಇರುತ್ತದೆ. ಹಾಗೆಯೇ ಶ್ರೀಗಳಿಗೆ ಬೆಂಬಲ ನೀಡಲು ನಾನು ಅವರ ಜೊತೆ ಇರಬೇಕೆಂದೇನಿಲ್ಲ. ನಾನು ಎಲ್ಲೇ ಇದ್ದರೂ ಶ್ರೀಗಳಿಗೆ ಬೆಂಬಲ ಇರುತ್ತದೆ ಎಂದು ಸುದೀಪ್ ಹೇಳಿದರು.

TV9 Kannada


Leave a Reply

Your email address will not be published.