– ಕಾಲರ್ ಪಟ್ಟಿ ಹಿಡಿದು ವೀಡಿಯೋ ಡಿಲೀಟ್ ಮಾಡಿಸಿದ್ರು

ಬಾಗಲಕೋಟೆ: ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಸವದಿ ಕಾರ್ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಪಘಾತದ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಹಣಮಂತ ದೊಡ್ಡಮನಿ, ಚಿದಾನಂದ್ ಸವದಿಯೇ ಡ್ರೈವರ್ ಸೀಟ್‍ನಲ್ಲಿ ಕುಳಿತಿದ್ರು ಎಂದು ಹೇಳಿದ್ದಾರೆ.

ಹಣಮಂತ ದೊಡ್ಡಮನಿ ಹೇಳಿದ್ದೇನು?:
ಆ್ಯಕ್ಸಿಡೆಂಟ್ ಆದ ಕೂಡಲೇ ರಸ್ತೆಗೆ ಓಡಿ ಹೋದಿವಿ. ಆದ್ರೆ ಕಾರ್ ನಲ್ಲಿದ್ದವರು ಯಾರು ಅಂತ ನಮಗೆ ಗೊತ್ತಿರಲಿಲ್ಲ. ಕಾರ್ ನಲ್ಲಿದ್ದವರು ಎಸ್ಕೇಪ್ ಆಗೋದಕ್ಕೆ ಮುಂದಾದಾಗ ಟೈರ್ ಹವಾ ಬಿಡುತ್ತಿದ್ದಂತೆ ಮತ್ತೊಂದು ವ್ಯಾನ್ ತರಿಸಿದರು. ಯಾಕೆ, ಏನಾಯ್ತು ಎಂದು ಕೇಳಲು ಹೋದಾಗ, ಡ್ರೈವರ್ ಸೀಟ್‍ನಿಂದ ಹೊರ ಬಂದ ಒಬ್ಬ, ನಾನು ಡಿಸಿಎಂ ಲಕ್ಷ್ಮಣ ಸವದಿ ಮಗ, ನನಗೆ ಮುಂದೆ ತುಂಬಾ ಕೆಲಸ ಇದೆ. ಅವನಿಗೆ ಸಣ್ಣ ಗಾಯವಾಗಿದೆ ಅಷ್ಟೇ, ಏನೂ ಆಗಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ನಮಗೆ ಅವಾಜ್ ಹಾಕಿದರು. ಆ ವ್ಯಕ್ತಿ ಹೇಳಿದಾಗಲೇ ನಮಗೆ ಆತ ಲಕ್ಷ್ಮಣ ಸವದಿ ಮಗ ಅನ್ನೋದು ಗುತ್ತಾಯ್ತು.

ಕಾರ್ ನಲ್ಲಿದ್ದವರು ನಮಗೆ ಅವಾಜ್ ಹಾಕಿ ಎಸ್ಕೇಪ್ ಆಗಲು ಮುಂದಾದ್ರು. ಕಾರ್ ನಿಂದ ಹೊರ ಬರುತ್ತಲೇ ನಂಬರ್ ಪ್ಲೇಟ್ ತೆಗೆದರು. ನಮ್ಮ ಊರಿನ ಜನರಿಗೆ ಫೋನ್ ಮಾಡಿದೆ. ವಿಷಯ ತಿಳಿಯುತ್ತಲೇ ಏಳೆಂಟು ಜನ ಬಂದರು. ಅದರಲ್ಲಿ ನಮ್ಮೂರಿನ ಒಬ್ಬ ಹುಡುಗ ವೀಡಿಯೋ ಮಾಡಿದ. ಅದಕ್ಕೆ ಕೋಪಗೊಂಡ ಚಿದಾನಂದ್ ಸವದಿ, ಆತನ ಕೊರಳ ಪಟ್ಟಿ ಹಿಡಿದು ಏಟು ಕೊಟ್ಟು ಮೊಬೈಲ್ ನಲ್ಲಿದ್ದ ವೀಡಿಯೋ ಡಿಲೀಟ್ ಮಾಡಿದ್ರು.

ನಾವೇ ಅಂಬುಲೆನ್ಸ್ ಗೆ ಕರೆ ಮಾಡಿದ್ದೀವಿ. ಗಾಯಾಳು ವ್ಯಕ್ತಿಯನ್ನ ಅಂಬುಲೆನ್ಸ್ ಗೆ ಹಾಕುತ್ತಿರುವಾಗ ಚಿದಾನಂದ್ ಸವದಿ ಮತ್ತು ಅವರ ಗೆಳೆಯರು ಮತ್ತೊಂದು ಕಾರ್ ನಲ್ಲಿ ಎಸ್ಕೇಪ್ ಆದ್ರು. ಇವತ್ತು ಬೆಳಗ್ಗೆ ಚಿದಾನಂದ್ ಸವದಿ ನೀಡಿರುವ ಹೇಳಿಕೆ ನೂರಕ್ಕೆ ನೂರರಷ್ಟು ಸುಳ್ಳು ಎಂದು ಹಣಮಂತ ದೊಡ್ಡಮನಿ ಹೇಳುತ್ತಾರೆ. ಇದನ್ನೂ ಓದಿ: ಚಿದಾನಂದ ಸವದಿ ಕಾರು ಚಾಲನೆ ಮಾಡ್ತಿರಲಿಲ್ಲ: ಎಸ್‍ಪಿ ಲೋಕೇಶ್ ಜಗಲಾಸರ್ 

ಚಿದಾನಂದ್ ಸವದಿ ಹೇಳಿದ್ದೇನು?:
ಅಂಜನಾದ್ರಿ ಬೆಟ್ಟದಿಂದ ಹಿಂದಿರುಗುವಾಗ ಹೈವೇಯಲ್ಲಿ ಅಪಘಾತವಾಯ್ತು. ಒಟ್ಟು ಎರಡು ಕಾರ್ ಗಳಲ್ಲಿ 10 ಜನ ಅಂಜನಾದ್ರಿಗೆ ಹೋಗಿದ್ದೀವಿ. ನನ್ನ ಕಾರ್ ಸುಮಾರು 30 ಕಿಲೋ ಮೀಟರ್ ದೂರ ಇತ್ತು. ಹಿಂದಿನಿಂದ ಬರುತ್ತಿದ್ದ ನನ್ನ ಕಾರ್ ಅಪಘಾತಕ್ಕೆ ಒಳಗಾಗಿದ್ದು, ಅದರಲ್ಲಿ ಸ್ನೇಹಿತರಿದ್ದರು. ನಮ್ಮ ಚಾಲಕನೇ ಕಾರ್ ಡ್ರೈವ್ ಮಾಡುತ್ತಿದ್ದನು. ಅಪಘಾತವಾದ ಕೂಡಲೇ ಚಾಲಕ ನನಗೆ ಫೋನ್ ಮಾಡಿದರು. ಆಗ ಕೂಡಲೇ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಹಾಗೆಯೇ ಸ್ಥಳೀಯ ಪೊಲೀಸ್ ಠಾಣೆಗೆ ಮಾತನಾಡಿದ್ದೇನೆ. ನಮ್ಮ ಸ್ನೇಹಿತರಿಬ್ಬರಿಗೆ ಆಸ್ಪತ್ರೆ ವೆಚ್ಚ ನೀಡುವದಾಗಿ ಹೇಳಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ

ನನ್ನ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಯಾರ ಕೊರಳ ಪಟ್ಟಿಯನ್ನು ನಾವು ಹಿಡಿದಿಲ್ಲ. ಯಾರಿಗೂ ಅವಾಜ್ ಹಾಕಿಲ್ಲ. ಕುಟುಂಬಸ್ಥರ ನಂಬರ್ ಇರಲಿಲ್ಲ ಹಾಗಾಗಿ ಯಾರನ್ನೂ ಸಂಪರ್ಕಿಸಿಲ್ಲ. ಆದ್ರೆ ಕೂಡಲೇ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಸದ್ಯ ಅಥಣಿಯಲ್ಲಿದ್ದಾನೆ. ಪೊಲೀಸರ ಮುಂದೆ ಹಾಜರಾಗ್ತಾನೆ. ದೇವರಾಣೆ, ನನ್ನ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳು ಶುದ್ಧ ಸುಳ್ಳು ಎಂದು ಪಬ್ಲಿಕ್ ಟಿವಿಗೆ ಬೆಳಗ್ಗೆ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಕಾರ್ ಪ್ಲೇಟ್ ನಂಬರ್ ಅವರೇ ಕಲ್ಲಿನಿಂದ ಜಜ್ಜಿದ್ರು, ಫೋಟೋ ತೆಗೆದವರನ್ನ ನಿಂದಿಸಿ ಅವಾಜ್ ಹಾಕಿದ್ರು

The post ನಾನೇ ಕಣ್ಣಾರೆ ನೋಡಿದ್ದೀನಿ, ಚಿದಾನಂದ್ ಸವದಿಯೇ ಡ್ರೈವರ್ ಸೀಟ್‍ನಲ್ಲಿ ಕುಳಿತಿದ್ರು: ಪ್ರತ್ಯಕ್ಷದರ್ಶಿ appeared first on Public TV.

Source: publictv.in

Source link