ಬೆಂಗಳೂರು: ನಟ ಸಂಚಾರಿ ವಿಜಯ್ ಅವರು ಇನ್ನು ಉಸಿರಾಟುತ್ತಿದ್ದಾರೆ. ಅವರನ್ನು ನೋಡಲು ಬಂದಿದೆ. ಚಿತ್ರರಂಗ ಸ್ಥಗಿತವಾಗಿದ್ದರೂ ಸಂಚಾರಿ ವಿಜಯ್ ಬಡವರ ನೆರವಿಗೆ ಮುಂದಾಗಿದ್ದರು. ಅವರಿಗೆ ದೇವರು ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ. ಜೊತೆಗೆ ಎಲ್ಲರೂ ಸಂಚಾರಿ ವಿಜಯ್​ಗಾಗಿ ಪ್ರಾರ್ಥಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್​ ಅವರು, ಸಂಚಾರಿ ವಿಜಯ್ ಒಬ್ಬ ವಿದ್ಯಾವಂತ ಯುವಕ. ಇಂಜಿನಿಯರಿಂಗ್ ಪದವಿ ಪಡೆದರೂ ಕಲೆಯಲ್ಲಿ ಸೇವೆ ಮಾಡಲು ಬಂದು ಹೆಮ್ಮೆ ತಂದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಕ್ಕೆ ಹೆಮ್ಮೆ ತಂದಿದ್ದರು. ತುಂಬಾ ಆಶಾವಾದಿಯಾಗಿದ್ದ ಆತ ಜೀವನದಲ್ಲಿ ಒಳ್ಳೆಯ ಕೆಲಸ ಮಾಡುವ ಗುರಿ ಹೊಂದಿದ್ದ.

ಮೊದಲು ನಾನು ಡಿಸಿಎಂ ಅಶ್ವತ್ಥ್​ ನಾರಾಯಣ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮೊದಲು ಅವರು ಚಿಕಿತ್ಸೆ ವೆಚ್ಚ ಬರಿಸುತ್ತೇನೆ ಎಂದು ಹೇಳಿದ ಬಳಿಕವೂ ಆಸ್ಪತ್ರೆ ಅವರು ಬೇಡ ಎಂದು ಹೇಳಿದ್ದಾರೆ. ಆದ್ದರಿಂದ ಚಿತ್ರರಂಗದ ಪರವಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ನಟ ಜಗ್ಗೇಶ್​ ಹೇಳಿದರು.

ಇದನ್ನೂ ಓದಿ: ಸಂಚಾರಿ ವಿಜಯ್ ಉಸಿರಾಡ್ತಿದ್ದಾರೆ.. ಅವರನ್ನ ಉಳಿಸುವ ಎಲ್ಲ ಪ್ರಯತ್ನ ಮಾಡಲಾಗ್ತಿದೆ- ಡಿಸಿಎಂ

The post ನಾನೇ ನೋಡಿ ಬಂದೆ.. ಸಂಚಾರಿ ವಿಜಯ್ ಉಸಿರಾಡ್ತಿದ್ದಾರೆ.. ಅವರಿಗಾಗಿ ಎಲ್ಲ ಪ್ರಾರ್ಥಿಸಿ- ಜಗ್ಗೇಶ್​ ಮನವಿ appeared first on News First Kannada.

Source: newsfirstlive.com

Source link