ನಾನೇ ಸಿಎಂ ಮುಖ; ಉ.ಪ್ರ ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿ ಘೋಷಣೆ


ಉತ್ತರ ಪ್ರದೇಶಕ್ಕೆ ‘ನಾನೇ ಸಿಎಂ ಮುಖ’ ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿತು. ಈ ವೇಳೆ ಮಾಧ್ಯಮಗಳು ನಿಮ್ಮ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರು ಎಂದು ಕೇಳಿದವು. ಅದಕ್ಕೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, ನಿಮಗೆ ಬೇರೆ ಮುಖ (ಸಿಎಂ ಅಭ್ಯರ್ಥಿ ಸ್ಥಾನಕ್ಕೆ ) ಕಾಣುತ್ತಿದೆಯೇ? ನಂತರ..? ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನ ನೋಡಬಹುದಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಮೂಲಕ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್​ನಿಂದ ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ ನಾನೇ ಅನ್ನೋ ಸುಳಿವು ನೀಡಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಅಂದ್ಹಾಗೆ ಕಾಂಗ್ರೆಸ್​ ಇನ್ನೂ ಉತ್ತರ ಪ್ರದೇಶಕ್ಕೆ ಸಿಎಂ ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ.

The post ನಾನೇ ಸಿಎಂ ಮುಖ; ಉ.ಪ್ರ ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿ ಘೋಷಣೆ appeared first on News First Kannada.

News First Live Kannada


Leave a Reply

Your email address will not be published. Required fields are marked *