ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್​​ಲೈನ್ಸ್​​​ ಕೊವಾಂಗ್​​ನಲ್ಲಿ ಪತ್ತೆ, ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ: ವರದಿ | Missing Nepal’s Tara Air found in Kowang in Mustang status yet to be ascertained says Report


ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್​​ಲೈನ್ಸ್​​​  ಕೊವಾಂಗ್​​ನಲ್ಲಿ ಪತ್ತೆ, ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ: ವರದಿ

ತಾರಾ ಏರ್ (ಸಂಗ್ರಹ ಚಿತ್ರ)

Image Credit source: Hindustan Times

ಕೊವಾಂಗ್: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ಸ್ಥಳೀಯ ವಿಮಾನಯಾನ ಸಂಸ್ಥೆಯ ಚಿಕ್ಕ ವಿಮಾನವು ಮುಸ್ತಾಂಗ್‌ನ ಕೊವಾಂಗ್‌ನಲ್ಲಿ ಪತ್ತೆಯಾಗಿದೆ. ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರು ತಿಳಿಸಿದ್ದಾರೆ. ನೇಪಾಳದ ತಾರಾ ಏರ್‌ಗೆ ಸೇರಿದ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪೋಖರಾದಿಂದ ಬೆಳಿಗ್ಗೆ 10.15 ಕ್ಕೆ ಹೊರಟಿದ್ದು 15 ನಿಮಿಷಗಳ ನಂತರ ಕಂಟ್ರೋಲ್ ಟವರ್ ನಿಂದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. (ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9kannada Web Team

| Edited By: Rashmi Kallakatta

May 29, 2022 | 4:57 PM
ಕೊವಾಂಗ್: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ಸ್ಥಳೀಯ ವಿಮಾನಯಾನ ಸಂಸ್ಥೆಯ ಚಿಕ್ಕ ವಿಮಾನವು ಮುಸ್ತಾಂಗ್‌ನ ಕೊವಾಂಗ್‌ನಲ್ಲಿ ಪತ್ತೆಯಾಗಿದೆ. ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರು ತಿಳಿಸಿದ್ದಾರೆ. ನೇಪಾಳದ ತಾರಾ ಏರ್‌ಗೆ ಸೇರಿದ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪೋಖರಾದಿಂದ ಬೆಳಿಗ್ಗೆ 10.15 ಕ್ಕೆ ಹೊರಟಿದ್ದು 15 ನಿಮಿಷಗಳ ನಂತರ ಕಂಟ್ರೋಲ್ ಟವರ್ ನಿಂದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published. Required fields are marked *