ನಾಪತ್ತೆಯಾಗಿದ್ದ 2 ವರ್ಷದ ಮಗು ಶವವಾಗಿ ಪತ್ತೆ, ಶವವನ್ನು ಮರಳಿನಲ್ಲಿ ಹೂತಿಟ್ಟಿದ್ದ ಹಂತಕರು | Two year old kid tortured and murdered in kalaburagi motive not known


ನಾಪತ್ತೆಯಾಗಿದ್ದ 2 ವರ್ಷದ ಮಗು ಶವವಾಗಿ ಪತ್ತೆ, ಶವವನ್ನು ಮರಳಿನಲ್ಲಿ ಹೂತಿಟ್ಟಿದ್ದ ಹಂತಕರು

ನಾಪತ್ತೆಯಾಗಿದ್ದ 2 ವರ್ಷದ ಮಗು ಶವವಾಗಿ ಪತ್ತೆ, ಶವವನ್ನು ಮರಳಿನಲ್ಲಿ ಹೂತಿಟ್ಟಿದ್ದ ಹಂತಕರು

ಕಲಬುರಗಿ: ಕಲಬುರಗಿ ನಗರದ ಫಿರ್ದೋಷ್ ಕಾಲೋನಿಯಿಂದ ನಾಪತ್ತೆಯಾಗಿದ್ದ 2 ವರ್ಷದ ಅಬೋಧ ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕೊಲೆ ಮಾಡಿದ್ದ ನಿರ್ದಯಿ ಹಂತಕರು ಶವವನ್ನು ಮನೆಯ ಸಮೀಪ ಮರಳಿನಲ್ಲಿ ಹೂತಿಟ್ಟಿರುವುದು ಪತ್ತೆಯಾಗಿದೆ. ಮೊಹಮ್ಮದ್ ಮುಜಮಿಲ್ ಅಹ್ಮದ್ ಕೊಲೆಯಾದ ಮಗು. ಕೊಲೆಯಾದ ಮಗುವಿನ ಮೈಮೇಲೆ ಸುಟ್ಟ ಗಾಯಗಳು ಕಂಡುಬಂದಿವೆ. ಕಲಬುರಗಿ ವಿವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕ ಮೊಹಮ್ಮದ್ ಮುಜಮಿಲ್ ಅಹ್ಮದ್ ಡಿಸೆಂಬರ್ 6 ರಂದು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮನೆಯಿಂದ ನಾಪತ್ತೆಯಾಗಿದ್ದ. ನಿನ್ನೆ ಸಂಜೆ ಬಾಲಕನ ಶವ ಪತ್ತೆಯಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡ ರಾತ್ರಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ರಾಯಚೂರು: ನಿನ್ನೆ ತಡ ರಾತ್ರಿ ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ ರಾಘವೇಂದ್ರ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *