ಬೆಂಗಳೂರು: ಹೈಕಮಾಂಡ್ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಆದ್ರೆ ಇಬ್ಬರೂ ನಾಯಕರು ಬೇರೆ ಬೇರೆ ಸಮಯದಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಸಂಜೆ 7.40 ರ ವಿಮಾನದಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದು ಇದಕ್ಕೂ ಮುನ್ನ ಒಂದು ಗಂಟೆ ಮುಂಚೆಯೇ ಸಿದ್ದರಾಮಯ್ಯ ಬೇರೊಂದು ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.

 

ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್.. ದೆಹಲಿ ಅನ್ನೋದು ನಮಗೆ ಕೇಂದ್ರ ಸ್ಥಳ, ದೇವಸ್ಥಾನವಿದ್ದಂತೆ. ಹೋಗ್ತಿರ್ತಿವಿ.. ಬರ್ತಿರ್ತಿವಿ.. ಎಲ್ಲಾ ವಿಚಾರಗಳನ್ನ ನೋಡಿಕೊಂಡು ಬರ್ತಿರ್ತೀವಿ. ಈಗಲೂ ಹಾಗೆಯೇ ಹೋಗ್ತಿದ್ದೀನಿ ಎಂದಿದ್ದಾರೆ. ಇನ್ನು ಹೈಕಮಾಂಡ್ ಬುಲಾವ್​ ಬಗ್ಗೆ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ.

The post ನಾಯಕತ್ವದ ಪೈಪೋಟಿ; ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ತೆರಳಿದ ಡಿಕೆಎಸ್​, ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link