ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಕೂಗು ಕೇಳಿಬಂದ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ರಾಜ್ಯ ಪ್ರವಾಸದಲ್ಲಿ, ಏನೆಲ್ಲಾ ರಾಜಕೀಯ ವಿದ್ಯಮಾನಗಳ ನಡೆಯಬಹುದು ಅನ್ನೋ ಕುತೂಹಲ ಸೃಷ್ಟಿಯಾಗಿದೆ.

ಯಾಕಂದ್ರೆ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನ ಕಳಗೆ ಇಳಿಸಿ, ಬೇರೆಯವ್ರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಾಗುತ್ತದೆ ಅನ್ನೋ ಚರ್ಚೆ ಜೋರಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ, ಪರ ಹಾಗೂ ವಿರೋಧವಾಗಿ ಅನೇಕ ಶಾಸಕರು ನೇರವಾಗಿ ಹೇಳಿಕೆಗಳನ್ನ ನೀಡಿದ್ದಾರೆ.

18ಕ್ಕೆ ಕೋರ್​ ಕಮಿಟಿ ಸಭೆ
ಹೀಗಾಗಿ ಅರುಣ್​ ಸಿಂಗ್, ರಾಜ್ಯ ಬಿಜೆಪಿ ನಾಯಕರನ್ನ ಹೇಗೆ ಕಂಟ್ರೋಲ್​​ಗೆ ತೆಗೆದುಕೊಳ್ತಾರೆ. ಜೊತೆಗೆ ನಾಯಕತ್ವ ಬದಲಾವಣೆಯ ಕೂಗಿನ ವಿಚಾರ ಏನಾಗುತ್ತೆ ಅನ್ನೋ ನಿರೀಕ್ಷೆ ಶುರುವಾಗಿದೆ. ಅದರಂತೆ ಅರಣ್ ಸಿಂಗ್ ಜೂನ್ 16 ಮಧ್ಯಾಹ್ನ 3:30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮೊದಲ ದಿನ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಅಂದರೆ ಸಂಜೆ 5 ಗಂಟೆ ಸುಮಾರಿಗೆ ಸಭೆ ನಡೆಸಲಿದ್ದು, ಈ ವೇಳೆ ಎಲ್ಲಾ ಸಚಿವರು ಭಾಗಿಯಾಗಲಿದ್ದಾರೆ. ಮಾರನೇ ದಿನ ಬಿಜೆಪಿ ಶಾಸಕರಗಳ ಜೊತೆ ಸಭೆ ನಡೆಸಲಿದ್ದಾರೆ. 18 ರಂದು ಕೂಡ ವಿವಿಧ ಪಕ್ಷ ಚಟುವಟಿಕೆಯಲ್ಲಿ ಭಾಗಿಯಾಗಿ ಸಂಜೆ 5 ಗಂಟೆಗೆ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಬಳಿಕ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.

The post ನಾಯಕತ್ವ ಬದಲಾವಣೆ ಕೂಗು.. ಅರುಣ್ ಸಿಂಗ್ ರಾಜ್ಯಕ್ಕೆ ಬಂದಾಗ ಏನೆಲ್ಲಾ ಆಗಬಹುದು? appeared first on News First Kannada.

Source: newsfirstlive.com

Source link