ನಾಯಕತ್ವ ಬದಲಾವಣೆ: ಪರ-ವಿರೋಧ ಮಾತಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ನಾಯಕತ್ವ ಬದಲಾವಣೆ: ಪರ-ವಿರೋಧ ಮಾತಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಪರ ಹಾಗೂ ವಿರುದ್ಧದ ಹೇಳಿಕೆ ಹಿನ್ನೆಲೆ ಬಹಿರಂಗ ಹೇಳಿಕೆ ನೀಡುತ್ತಿರುವವರ ವಿರುದ್ಧ ಬಿಜೆಪಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಸಿಎಂ ಯಡಿಯೂರಪ್ಪ ಪರ ಹಾಗೂ ವಿರುದ್ಧ ಹೇಳಿಕೆ ನೀಡಿರುವವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸಿಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಕೇಂದ್ರದ ಶಿಸ್ತು ಸಮಿತಿಗೆ ಲಿಂಗರಾಜ್ ಪಾಟೀಲ್ ಅಧ್ಯಕ್ಷತೆಯ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಶಿಫಾರಸು ಕಳುಹಿಸಲು ಮುಂದಾಗಿದೆಯಂತೆ.

ಕಳೆದ ಒಂದು ತಿಂಗಳಿಂದ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರು, ಸಚಿವ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಕಳುಹಿಸಲು ಚಿಂತನೆ ನಡೆಸಲಾಗಿದ್ದು ಈ ಪಟ್ಟಿಯಲ್ಲಿ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ಅರವಿಂದ ಬೆಲ್ಲದ್, ಸಚಿವ ಸಿ.ಪಿ. ಯೋಗೇಶ್ವರ್, ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇದ್ದಾರೆ ಎನ್ನಲಾಗಿದೆ. ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರಿಗೂ ರಾಜ್ಯ ಶಿಸ್ತು ಸಮಿತಿ ಮನವಿ ಮಾಡಿದೆ ಎಂದು ಹೇಳಲಾಗಿದೆ.

The post ನಾಯಕತ್ವ ಬದಲಾವಣೆ: ಪರ-ವಿರೋಧ ಮಾತಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ appeared first on News First Kannada.

Source: newsfirstlive.com

Source link